ಮದ್ಯಪಾನವು ಕೇವಲ ಯಕೃತ್ತಿನ ಕಾರ್ಯಕ್ಷಮತೆಯನ್ನು ಕುಂದಿಸುವುದು ಮಾತ್ರವಲ್ಲದೆ, ಕ್ಯಾನ್ಸರ್ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ದೀರ್ಘಕಾಲದ ಮದ್ಯಪಾನವು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಷ್ಟೇ ಅಲ್ಲದೆ, ಆಲ್ಕೋಹಾಲ್ ದೇಹದ ಹಾರ್ಮೋನುಗಳ ಮೇಲೆ, ವಿಶೇಷವಾಗಿ ಮಹಿಳೆಯರಲ್ಲಿ ಈಸ್ಟ್ರೊಜೆನ್ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸಂಶೋಧನೆಗಳ ಪ್ರಕಾರ, ದಿನಕ್ಕೆ ಕೇವಲ ಒಂದು ಪೆಗ್ ಮದ್ಯ ಸೇವಿಸಿದರೂ ಸ್ತನ ಕ್ಯಾನ್ಸರ್ ಅಪಾಯವು ಶೇ. 7 ರಿಂದ 10 ರಷ್ಟು ಹೆಚ್ಚಾಗುತ್ತದೆ.