ನಮ್ಮ ಪ್ರತಿನಿತ್ಯದ ಆಹಾರ ಪದ್ಧತಿಗಳು ದೀರ್ಘಕಾಲದ ಕಾಯಿಲೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಜೀವಿತಾವಧಿಯನ್ನು ಇನ್ನಷ್ಟು ಹೆಚ್ಚುಗೊಳಿಸಿಕೊಳ್ಳುವುದು ಉತ್ತಮ ವಿಧಾನ. ಹಾಗಾಗಿ ಊಟದಲ್ಲಿ ಪೌಷ್ಟಿಕವಾದ ಆಹಾರಗಳನ್ನು ಸೇವಿಸಬೇಕು. ಹೆಚ್ಚು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು, ದ್ವಿದಳ ಧಾನ್ಯಗಳು, ಮೀನು, ಕಡಿಮೆ ಕೊಬ್ಬಿನ ಪ್ರೋಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸೇವಿಸುವುದರಿಂದ ಜೀವಕೋಶಗಳಲ್ಲಾಗುವ ಹಾನಿಯನ್ನು ತಡೆಯಲು ಸಾಧ್ಯವಾಗುತ್ತದೆ.