ಗರ್ಭಾವಸ್ಥೆಯಲ್ಲಿ ಪ್ರತಿ ಮಹಿಳೆ ತನ್ನ ಹೆರಿಗೆ ಸಾಮಾನ್ಯವಾಗಿರಬೇಕೆಂದು ಬಯಸುತ್ತಾರೆ. ವಾಸ್ತವವಾಗಿ ಸಿ-ಸೆಕ್ಷನ್ ಅನೇಕ ಅಡ್ಡಪರಿಣಾಮಗಳನ್ನು ಹೊಂದಿದೆ ಮತ್ತು ಚೇತರಿಕೆಗೂ ಸಮಯ ತೆಗೆದುಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಸಾಮಾನ್ಯ ಹೆರಿಗೆಯನ್ನು ಉತ್ತಮವೆಂದು ಕಂಡುಕೊಳ್ಳುತ್ತಾರೆ. ಇದಕ್ಕಾಗಿ ಮನೆಯ ಹಿರಿಯರು ವಿವಿಧ ಪರಿಹಾರಗಳನ್ನು ಸೂಚಿಸುತ್ತಾರೆ.(Health Tips)

ಇದನ್ನು ಓದಿ: ಫೋನ್ ಅನ್ನು ಮುಂಭಾಗದ ಜೇಬಿನಲ್ಲಿ ಇಡುವುದು ಅಪಾಯಕಾರಿ; ಪುರುಷರಿಗೆ ಈ ಮಾಹಿತಿ ತಿಳಿದಿರಲೇಬೇಕು | Health Tips
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಏಳನೇ ತಿಂಗಳಿನಿಂದ ಅರಿಶಿನದೊಂದಿಗೆ ಬೆರೆಸಿದ ಹಸುವಿನ ಹಾಲನ್ನು ಕುಡಿಯುವುದರಿಂದ ಸಾಮಾನ್ಯ ಹೆರಿಗೆಯ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಉಲ್ಲೇಖಿಸಿರುವ ವಿಷಯವೊಂದ ಸಾಕಷ್ಟು ವೈರಲ್ ಆಗುತ್ತಿದೆ. ಗರ್ಭಿಣಿ ಮಹಿಳೆ ಗರ್ಭಧಾರಣೆಯ ಏಳನೇ ತಿಂಗಳಿನಿಂದ ಹಸುವಿನ ಹಾಲು ಮತ್ತು ಅರಿಶಿನವನ್ನು ಸೇವಿಸಬೇಕು. ಇದರಿಂದ ಸಾಮಾನ್ಯ ಹೆರಿಗೆ ಸುಲಭವಾಗಿ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದನ್ನು ತಜ್ಞರು ಒಪ್ಪುತ್ತಾರೆಯೇ? ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ತಜ್ಞರ ಪ್ರಕಾರ ಎಮ್ಮೆ ಹಾಲಿಗೆ ಹೋಲಿಸಿದರೆ ಗರ್ಭಾವಸ್ಥೆಯಲ್ಲಿ ಹಸುವಿನ ಹಾಲು ಹಗುರವಾಗಿರುತ್ತದೆ ಮತ್ತು ಹೆಚ್ಚು ಜೀರ್ಣವಾಗುತ್ತದೆ ಎಂಬುದು ನಿಜ. ಆದರೆ ಹೆರಿಗೆಯ ನಂತರ ಅರಿಶಿನವು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಗರ್ಭಾಶಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದರೆ ಇದು ಸಾಮಾನ್ಯ ಹೆರಿಗೆಯನ್ನು ಖಾತರಿಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಗರ್ಭಾವಸ್ಥೆಯಲ್ಲಿ ಅರಿಶಿನ ಸೇವಿಸುವುದರಿಂದ ಸಾಮಾನ್ಯ ಹೆರಿಗೆಯಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ತಜ್ಞರ ಅಭಿಪ್ರಾಯವಾಗಿದೆ. ಸಣ್ಣ ಪ್ರಮಾಣದಲ್ಲಿ ಅರಿಶಿನ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು. ಆದರೆ ಗರ್ಭಾವಸ್ಥೆಯಲ್ಲಿ ಅದರ ಪ್ರಯೋಜನಗಳು ಬಹಳ ಸೀಮಿತವಾಗಿವೆ. ಗರ್ಭಾವಸ್ಥೆಯಲ್ಲಿ ಅರಿಶಿನ ಹಾಲು ಸೇವಿಸುವ ಮೊದಲು ಗರ್ಭಿಣಿಯರು ಒಮ್ಮೆ ತಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅಂತಹ ನಂಬಿಕೆಗಳನ್ನು ಕುರುಡಾಗಿ ನಂಬುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ.
ಜಪಾನೀಸ್ ಮನೆಮದ್ದು ಬಳಸಿ ಹೊಟ್ಟೆ ಸುತ್ತಲಿನ ಬೊಜ್ಜನ್ನು ಕರಗಿಸಿ; ನಿಮಗಾಗಿ ಈ ಹೆಲ್ತಿ ಟಿಪ್ಸ್ | Health Tips