ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ ವಹಿಸುವುದು ಮುಖ್ಯವಾಗಿದೆ. ಆದರೆ ರಾತ್ರಿ ಮಲಗುವ ಮುನ್ನ ಕೇವಲ ಮೇಕಪ್ ತೆಗೆದರೆ ಸಾಕಾಗದು. ಹಾಗಾದ್ರೆ ನಾವು ಪ್ರತಿದಿನ ಸ್ವಚ್ಛ ಮತ್ತು ಹೊಳೆಯುವ ತ್ವಚೆ ಪಡೆಯಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.(Health Tips)
ಪ್ರತಿದಿನ ಬೆಳಗ್ಗೆ ನೀವು ಕಾಂತಿಯುತ ಹೊಳೆಯುವ ಚರ್ಮವನ್ನು ಪಡೆಯಲು ಪ್ರತಿದಿನ ರಾತ್ರಿ ಚರ್ಮದ ಆರೈಕೆ ಹೇಗೆ ಮಾಡುವುದು ಎಂಬುದಕ್ಕೆ ಈ ವಿಧಾನವನ್ನು ಅನುಸರಿಸಿ
- ದಿನವಿಡೀ ನಮ್ಮ ಚರ್ಮವು ಧೂಳು, ಮಾಲಿನ್ಯ ಮತ್ತು ಮೇಕಪ್ನಿಂದ ಮುಚ್ಚಿಹೋಗುತ್ತದೆ. ಆದ್ದರಿಂದ ಪ್ರತಿ ರಾತ್ರಿ ಮಲಗುವ ಮುನ್ನ ಎರಡು ಬಾರಿ ಶುದ್ಧೀಕರಣ ಮಾಡುವುದು ಮುಖ್ಯ.
- ನಿಮ್ಮ ಚರ್ಮಕ್ಕೆ ಅನುಗುಣವಾಗಿ ತೈಲ ಆಧಾರಿತ ಕ್ಲೆನ್ಸರ್ನೊಂದಿಗೆ ಮೇಕಪ್ ಮತ್ತು ಕೊಳೆಯನ್ನು ತೆಗೆದುಹಾಕಿ. ಅದರ ನಂತರ, ಫೋಮ್ ಅಥವಾ ಜೆಲ್ ಆಧಾರಿತ ಕ್ಲೆನ್ಸರ್ನೊಂದಿಗೆ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸಿ. ಇದು ನಿಮ್ಮ ರಂಧ್ರಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತದೆ ಮತ್ತು ನಿಮ್ಮ ಚರ್ಮವು ತಾಜಾವಾಗಿ ಕಾಣುತ್ತದೆ.
- ಎಕ್ಸ್‌ಫೋಲಿಯೇಟಿಂಗ್ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಉತ್ತಮ ಮಾರ್ಗವಾಗಿದೆ. ಆದರೆ ಪ್ರತಿದಿನ ಇದನ್ನು ಮಾಡಬೇಡಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚರ್ಮವು ಹೊಳೆಯುವಂತೆ ಮಾಡುತ್ತದೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ವಾರಕ್ಕೆ ಎರಡು ಬಾರಿ ಎಫ್ಫೋಲಿಯೇಟ್ ಮಾಡಿ. ಎಫ್ಫೋಲಿಯೇಟ್ ಮಾಡುವಾಗ ಹೆಚ್ಚು ಬಲವನ್ನು ಅನ್ವಯಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ ಚರ್ಮದ ಕಿರಿಕಿರಿ ಉಂಟಾಗಬಹುದು.
- ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ನೀವು ಸೀರಮ್ ತೆಗೆದುಕೊಳ್ಳಬಹುದು. ನಿಮ್ಮ ಮುಖದ ಮೇಲೆ ಮೊಡವೆಗಳಿದ್ದರೆ ನೀವು ಸ್ಯಾಲಿಸಿಲಿಕ್ ಆಸಿಡ್ ಸೀರಮ್ ಅನ್ನು ಬಳಸಬಹುದು. ಡ್ರೈಸ್ಕಿನ್ ಹೊಂದಿದ್ದರೆ ಹೈಲುರಾನಿಕ್ ಆಸಿಡ್ ಸೀರಮ್ ನಿಮಗೆ ಒಳ್ಳೆಯದು. ಆದರೆ ಅವುಗಳನ್ನು ಬಳಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.
ನೀರಿನ ಜತೆಗೆ ಈ 3 ಪದಾರ್ಥಗಳನ್ನು ಸೇವಿಸಿ; ಡಿಹೈಡ್ರೇಟ್ ಆಗುವುದನ್ನು ತಪ್ಪಿಸಿ | Health Tips