ಹಾಸಿಗೆಯ ಮೇಲೆ ಕುಳಿತು ಆಹಾರ ಏಕೆ ಸೇವಿಸಬಾರದು; ಇಲ್ಲಿದ ಅಸಲಿ ಕಾರಣ | Health Tips

Untitled design - 2024-12-10T195101.433
Published on

ಧರ್ಮಗ್ರಂಥಗಳಲ್ಲಿ ಎಲ್ಲದಕ್ಕೂ ಸಂಬಂಧಿಸಿದ ನಿಯಮಗಳಿವೆ. ಅದನ್ನು ಅನುಸರಿಸಿ ನಾವು ಜೀವನದಲ್ಲಿ ನಕಾರಾತ್ಮಕತೆಯನ್ನು ತಪ್ಪಿಸಬಹುದು. ಇದೆ ಕಾರಣಕ್ಕಾಗಿ ಅಜ್ಜಿಯರು ದೈನಂದಿನ ದಿನಚರಿಗೆ ಸಂಬಂಧಿಸಿದ ಅನೇಕ ಕೆಟ್ಟ ಅಭ್ಯಾಸಗಳನ್ನು ಮಾಡದಂತೆ ನಮ್ಮನ್ನು ತಡೆಯುತ್ತಿದ್ದರು. ಇದರಿಂದ ನಾವು ದೈಹಿಕ ಅಥವಾ ಮಾನಸಿಕ ತೊಂದರೆಗಳನ್ನು ಎದುರಿಸುವುದು ತಪ್ಪುತ್ತದೆ.

ಬಾಲ್ಯದಿಂದಲೂ ಇಲ್ಲಿಯವರೆಗೂ ನೀವು ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸಿದಾಗ, ಅಜ್ಜಿಯರು ಹಾಸಿಗೆಯ ಮೇಲೆ ಕುಳಿತು ಊಟ ಮಾಡಬಾರದು ಎಂದು ಹೇಳುವುದನ್ನು ಕೇಳಿರುತ್ತೀರಿ. ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದನ್ನು ಏಕೆ ವಿರೋಧಿಸುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ನಾವು ಹಾಸಿಗೆಯಲ್ಲಿ ಆಹಾರವನ್ನು ಸೇವಿಸಿದರೆ ಏನಾಗುತ್ತದೆ ಮತ್ತು ಇದಕ್ಕೆ ಧರ್ಮಗ್ರಂಥಗಳಲ್ಲಿ ಕಾರಣವೇನು?(ಆಹಾರ ನಿಯಮಗಳು) ಎಂಬ ಮಾಹಿತಿ ಇಲ್ಲಿದೆ.

ಹಾಸಿಗೆಯಲ್ಲಿ ಕುಳಿತು ಊಟ ಮಾಡುವುದು ಏಕೆ ಅಶುಭ?

ಇಂದಿಗೂ ಹಿರಿಯರು ತಮ್ಮ ಕೆಲಸವನ್ನು ಸಂಪೂರ್ಣ ಶಿಸ್ತು ಮತ್ತು ಶಾಂತತೆಯಿಂದ ಮಾಡುತ್ತಾರೆ. ತಿನ್ನುವ ಮೊದಲು, ಅವರು ಆಹಾರದ ತಟ್ಟೆಗೆ ನಮಸ್ಕರಿಸುವುದನ್ನು ನೀವು ಗಮನಿಸಿರಬೇಕು. ಅದು ಆಹಾರದ ಗೌರವವನ್ನು ತೋರಿಸುತ್ತದೆ. ಹಾಸಿಗೆಯ ಮೇಲೆ ತಿನ್ನುವುದು ಆಹಾರಕ್ಕೆ ಅವಮಾನವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣವೆಂದರೆ ಹಾಸಿಗೆಯನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಮಲಗುವ ಸ್ಥಳವಾಗಿದೆ.

ಹಾಸಿಗೆಯ ಮೇಲೆ ಆಹಾರವನ್ನು ತಿನ್ನುವುದು ಖಂಡಿತವಾಗಿಯೂ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸುತ್ತದೆ ಎಂದು ಪರಿಗಣಿಸಲಾಗಿದೆ. ಅಲ್ಲದೆ, ರಾಹು ಮತ್ತು ಗುರು ಸಹ ಕೋಪಗೊಳ್ಳುತ್ತಾರೆ. ಜ್ಯೋತಿಷ್ಯದಲ್ಲಿ ತಾಯಿ ಲಕ್ಷ್ಮಿ, ರಾಹು ಮತ್ತು ಗುರುವಿನ ಪ್ರಮುಖ ಪಾತ್ರವನ್ನು ಸಂತೋಷ ಮತ್ತು ಅದೃಷ್ಟಕ್ಕಾಗಿ ಹೇಳಲಾಗಿದೆ. ನಿಮ್ಮ ಕೆಟ್ಟ ಅಭ್ಯಾಸಗಳಿಂದ ಈ ಮೂರೂ ಕೋಪಗೊಂಡರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಹಣದ ಕೊರತೆ ಇರುತ್ತದೆ.

ಊಟ ಮಾಡಲು ಸರಿಯಾದ ಸ್ಥಳ ಯಾವುದು

ಧರ್ಮಗ್ರಂಥಗಳ ಪ್ರಕಾರ, ಆಹಾರವನ್ನು ತಿನ್ನಲು ಸರಿಯಾದ ಸ್ಥಳವೆಂದರೆ ಅಡುಗೆಮನೆಯ ಬಳಿ. ಹಿಂದಿನ ಕಾಲದಲ್ಲಿ ಅಡುಗೆ ಮನೆಯಲ್ಲಿ ಕಾಲು ಮಡಚಿ ಕುಳಿತು ಊಟ ಮಾಡುತ್ತಿದ್ದರು. ಅಡುಗೆ ಮನೆಯಲ್ಲಿಯೇ ಆಹಾರ ತಯಾರಿಸಿ ಅಲ್ಲಿಯೇ ಬಡಿಸುವುದು ಸಲೀಸಾಗಿದ್ದು, ಬಿಸಿ ಬಿಸಿಯಾಗಿ ಊಟ ಸೇವಿಸಬಹುದಿತ್ತು. ಇದೇ ಕಾರಣಕ್ಕಾಗಿ ಅಡುಗೆ ಮನೆಯಲ್ಲಿ ಆಹಾರ ಸೇವಿಸುತ್ತಿದ್ದರು. ಇಂದಿಗೂ ಜನರು ತಮ್ಮ ಡೈನಿಂಗ್ ಟೇಬಲ್ ಅನ್ನು ಅಡುಗೆಮನೆಯ ಬಳಿ ಇಡಲು ಇದು ಕಾರಣವಾಗಿದೆ.

ನೀವು ಊಟ ಮಾಡಲು ನೆಲದ ಮೇಲೆ ಅಥವಾ ಡೈನಿಂಗ್ ಟೇಬಲ್‌ನಲ್ಲಿ ಕುಳಿತುಕೊಳ್ಳಬಹುದು. ಇದರಿಂದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಏಕೆಂದರೆ ನೀವು ಡೈನಿಂಗ್ ಟೇಬಲ್‌ನಲ್ಲಿ ಅಥವಾ ಕೆಳಗೆ ಕುಳಿತು ಆಹಾರವನ್ನು ಸೇವಿಸಿದಾಗ, ಈ ಸ್ಥಿತಿಯಲ್ಲಿ ನಿಮ್ಮ ಹೊಟ್ಟೆ ನೇರವಾಗಿರುತ್ತದೆ ಮತ್ತು ಆಹಾರವು ನೇರವಾಗಿ ನಿಮ್ಮ ಹೊಟ್ಟೆಗೆ ಹೋಗುತ್ತದೆ. ಇದು ಆಹಾರದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹಾಸಿಗೆಯ ಮೇಲೆ ಕುಳಿತು ಊಟ ಮಾಡುವಾಗ ದೇಹ ಬಾಗಿದಂತಾಗಿದ್ದು, ಇದರಿಂದ ಶ್ವಾಸನಾಳದಲ್ಲಿ ಆಹಾರ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ಅಜ್ಜಿಯರು ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ತಿನ್ನಲು ನಿರಾಕರಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net