ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ. ಕರಿಬೇವಿನ ಎಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳು ಅನೇಕ ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ನೀವು ಪ್ರತಿದಿನ ಕರಿಬೇವಿನ ಎಲೆಗಳನ್ನು ನೀರಿಗೆ ನೆನೆಹಾಕಿ ಬಳಿಕ ಅದನ್ನು ಅಗಿದು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಇದನ್ನು ಓದಿ: ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ; ಅದಕ್ಕೆ ಕಾರಣ & ಲಕ್ಷಣವೇನು ಎಂಬ ಮಾಹಿತಿ ಇಲ್ಲಿದೆ | Health Tips
ಕರಿಬೇವಿನ ಎಲೆಗಳನ್ನು ಜಗಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೀವಸತ್ವಗಳ ಜತೆಗೆ ಕರಿಬೇವಿನ ಎಲೆಗಳು ಹೇರಳವಾಗಿ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಈ ಪೋಷಕಾಂಶಗಳು ನಮ್ಮ ದೇಹವನ್ನು ಬಲಪಡಿಸುತ್ತದೆ.
ಕರಿಬೇವಿನ ಎಲೆಗಳ ಸೇವನೆಯು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆಳಗ್ಗೆ ಎದ್ದ ನಂತರ ವಾಕರಿಕೆ ಅಥವಾ ವಾಂತಿಯ ಸಮಸ್ಯೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕರಿಬೇವಿನ ಎಲೆಗಳನ್ನು ಜಗಿಯುವುದು ಬಹಳಷ್ಟು ಪರಿಹಾರವನ್ನು ನೀಡುತ್ತದೆ. ವಾಸ್ತವವಾಗಿ ಕರಿಬೇವಿನ ಎಲೆಗಳು ಕಾರ್ಮಿನೇಟಿವ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಹೊಟ್ಟೆಯಲ್ಲಿ ಊತ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.
ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಕಿಣ್ವಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಸೊಪ್ಪನ್ನು ತಿನ್ನುವುದರಿಂದ ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬುವುದು ಇತ್ಯಾದಿ ಸಮಸ್ಯೆಗಳು ಬರುವುದಿಲ್ಲ.
ಕರಿಬೇವಿನ ಎಲೆಗಳು ಮಧುಮೇಹ ರೋಗಿಗಳಿಗೆ ಬಹಳ ಅದ್ಭುತವಾದ ಮೂಲಿಕೆಯಾಗಿದೆ. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ.
ಕೀಲುನೋವಿಗೆ ಈ 4 ಪದಾರ್ಥಗಳೆ ರಾಮಬಾಣ; ಮಿಸ್ ಮಾಡ್ದೆ ಪ್ರಯತ್ನಿಸಿ | Health Tips