ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

blank

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ ಚಿಂತಿತರಾಗಿರುತ್ತಾರೆ. ತೂಕ ಇಳಿಸಿಕೊಳ್ಳಲು ಜನರು ವಿವಿಧ ರೀತಿಯ ಆಹಾರ ಪದ್ಧತಿ ಮತ್ತು ವ್ಯಾಯಾಮಗಳನ್ನು ಪ್ರಯತ್ನಿಸುತ್ತಾರೆ. ಆದರೆ ಆಹಾರ ಪದ್ಧತಿಯ ಬಗ್ಗೆ ಸರಿಯಾದ ಗಮನ ಹರಿಸದ ಕಾರಣ ಅವರು ಬಯಸಿದ ಫಲಿತಾಂಶಗಳನ್ನು ಪಡೆಯುವುದಿಲ್ಲ.(Health Tips)

ಇದನ್ನು ಓದಿ: ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದಾಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ನಿಮ್ಮ ಆಹಾರದಲ್ಲಿ ಬೀಟ್ರೂಟ್, ಬ್ರೊಕೊಲಿ, ಪಾಲಕ್, ಎಲೆಕೋಸು ಮತ್ತು ಸೌತೆಕಾಯಿಯಂತೆ ಕಾಣುವ ಝುಕಿನಿ ತರಕಾರಿಗಳನ್ನು ಸೇರಿಸುವುದರಿಂದ ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸಬಹುದು . ಈ ತರಕಾರಿಗಳು ಫೈಬರ್, ಖನಿಜಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿವೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದರ ಜತೆಗೆ ನಮ್ಮ ದೇಹವನ್ನು ಆರೋಗ್ಯವಾಗಿಡುತ್ತದೆ.

ಈ ಐದು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಕೆಲವೇ ವಾರಗಳಲ್ಲಿ ತೂಕವನ್ನು ಕಡಿಮೆ ಮಾಡಬಹುದು. ಕೆಲವು ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಳ್ಳುವುದು ಸಣ್ಣ ವಿಷಯವಲ್ಲ. ಈ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರ ಜತೆಗೆ ದೈಹಿಕ ಚಟುವಟಿಕೆಗಳನ್ನು ಮಾಡಬೇಕು. ನಿಮ್ಮ ದೇಹವನ್ನು ಹೈಡ್ರೀಕರಿಸಿಟ್ಟುಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು.

ಬೀಟ್ರೂಟ್​​

ಬೀಟ್ರೂಟ್​​​ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರ ಜತೆಗೆ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿದೆ. ಇದರಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ದೇಹದ ಸಂಪೂರ್ಣ ನಿರ್ವಿಶೀಕರಣಕ್ಕೆ ಬೀಟ್ರೂಟ್ ಉತ್ತಮ ಆಯ್ಕೆಯಾಗಿದೆ. ನಾರಿನಂಶ ಹೇರಳವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ. ಬೀಟ್ರೂಟ್​ನಲ್ಲಿ ಹೇರಳವಾಗಿರುವ ನೈಟ್ರೇಟ್​ಗಳು ರಕ್ತಪರಿಚಲೆನೆಗೆ ಸಹಕಾರಿಯಾಗಿದೆ.

ಪಾಲಕ್​​

ಪಾಲಕ್ ಸೊಪ್ಪು ಕಡಿಮೆ ಕ್ಯಾಲೋರಿ ಹೊಂದಿರುವ ಸೂಪರ್‌ಫುಡ್ ಆಗಿದ್ದು, ಇದರಲ್ಲಿ ಹಲವು ಪೋಷಕಾಂಶಗಳಿವೆ. ಪಾಲಕ್ ಸೊಪ್ಪಿನಲ್ಲಿ ಫೈಬರ್, ಕಬ್ಬಿಣಾಂಶ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಕಂಡುಬರುತ್ತವೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಥೈಕೊಯ್ನಾಯ್ಡ್ ಎಂಬ ಅಂಶವನ್ನು ಹೊಂದಿದ್ದು ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪಾಲಕ್ ಪ್ರಯೋಜನಕಾರಿಯಾಗಿದೆ. ಇದು ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಯನ್ನು ಸುಧಾರಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಎಲೆಕೋಸು

ಎಲೆಕೋಸಿನಲ್ಲಿ ಸಾಕಷ್ಟು ಫೈಬರ್ ಮತ್ತು ನೀರು ಇರುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ. ಇದು ಅತಿಯಾಗಿ ತಿನ್ನುವ ಅಭ್ಯಾಸವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಎಲೆಕೋಸು ಸೇವಿಸುವುದರಿಂದ ದೇಹದಲ್ಲಿ ಸಿಲುಕಿರುವ ವಿಷವನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ. ಇದು ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಕಾರ್ಬನ್ ಆಹಾರವಾಗಿದ್ದು ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಇದು ಕಿಣ್ವಗಳನ್ನು ಹೊಂದಿದ್ದು ಕೊಬ್ಬನ್ನು ವೇಗವಾಗಿ ಸುಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸೌತೆಕಾಯಿಯಂತೆ ಕಾಣುವ ಝುಕಿನಿ

ಸೌತೆಕಾಯಿಯಂತೆ ಕಾಣುವ ಝುಕಿನಿಯಲ್ಲಿ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಬಹಳ ಕಡಿಮೆ ಇರುವುದರಿಂದ ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಲ್ಲಿ ಹೆಚ್ಚಿನ ನಾರಿನ ಅಂಶ ಇರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರವಿಡುತ್ತದೆ. ಇದರಲ್ಲಿ ವಿಟಮಿನ್ ಬಿ6 ಇದ್ದು, ಇದು ಕೊಬ್ಬನ್ನು ಸುಡಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

Share This Article

ಬೆಲ್ಲ ತಿಂದ್ರೆ ಬೆಟ್ಟದಷ್ಟು ಉಪಯೋಗ! ಆದರೆ ಬೆಲ್ಲ ತಿನ್ನುವುದರಿಂದ ನಿಮ್ಮ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆಯೇ? Jaggery Benefits

Jaggery Benefits:  ಬೆಲ್ಲ ತಿಂದ್ರೆ ಬೆಟ್ಟದಷ್ಟು ಉಪಯೋಗಗಳಿವೆ. ಪ್ರತಿದಿನ ಬೆಳಗ್ಗೆ ಬೆಲ್ಲ ತಿಂದ್ರೆ ಆರೋಗ್ಯಕ್ಕೆ ತುಂಬಾ…

ಈ 3 ರಾಶಿಯವರು ತಮ್ಮ ತಾಯಂದಿರನ್ನು ದೇವತೆಯಂತೆ ನೋಡಿಕೊಳ್ಳುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಮನೆಯಲ್ಲೇ ಮಾಡಿ ಟೇಸ್ಟಿ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪ್ಪಿನಕಾಯಿ ಇಲ್ಲದೆ ಊಟ ಸಂಪೂರ್ಣ ಎನ್ನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ…