ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ, ಇ ಮತ್ತು ಕೆ), ಕೋಲೀನ್ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತವೆ. ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಮತ್ತು ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ನೀವು ಕೇಳಿರಬಹುದು. ಇದರ ಹಿಂದಿನ ಕಾರಣವನ್ನು ಸಂಶೋಧಕರು ಪದೇ ಪದೆ ಪರಿಶೀಲಿಸಿದ್ದಾರೆ. (Health Tips)
ಇದನ್ನು ಓದಿ: ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಬೇಕೇ?; ಅಡುಗೆಮನೆಯಲ್ಲಿನ ಈ 2 ವಸ್ತುಗಳನ್ನು ತಪ್ಪದೆ ಬಳಸಿ | Health Tips
ಆದರೆ ಮೊಟ್ಟೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬುದನ್ನು ಸಂಶೋಧಕರು ನಿರಾಕರಿಸಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ಮೊಟ್ಟೆಗಳನ್ನು ತಿನ್ನುವುದರಿಂದ ವಯಸ್ಸಾದವರ ಹೃದಯಕ್ಕೆ ಪ್ರಯೋಜನವಾಗಬಹುದು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಸಾಯುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಿಳಿಸಲಾಗಿದೆ.
ಸಂಶೋಧನೆಯಲ್ಲಿ 8,000ಕ್ಕೂ ಹೆಚ್ಚು ಜನರ ವಿಶ್ಲೇಷಣೆಯಲ್ಲಿ, ಸಂಶೋಧಕರು ಜನರು ಸಾಮಾನ್ಯವಾಗಿ ತಿನ್ನುವ ಆಹಾರವನ್ನು ಪರೀಕ್ಷಿಸಿದರು. ವೈದ್ಯಕೀಯ ದಾಖಲೆಗಳು ಮತ್ತು ಅಧಿಕೃತ ವರದಿಗಳನ್ನು ಬಳಸಿಕೊಂಡು ಆರು ವರ್ಷಗಳಲ್ಲಿ ಎಷ್ಟು ಭಾಗವಹಿಸುವವರು ಸತ್ತರು ಮತ್ತು ಯಾವ ಕಾರಣದಿಂದಾಗಿ ಸತ್ತರು ಎಂಬುದನ್ನು ನೋಡಿದರು. ಸಂಶೋಧಕರು ಆಹಾರ ಪ್ರಶ್ನಾವಳಿಯ ಮೂಲಕ ತಮ್ಮ ಆಹಾರ ಪದ್ಧತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಇದರಲ್ಲಿ ಕಳೆದ ವರ್ಷದಲ್ಲಿ ಭಾಗವಹಿಸುವವರು ಎಷ್ಟು ಬಾರಿ ಮೊಟ್ಟೆಗಳನ್ನು ತಿನ್ನುತ್ತಿದ್ದರು ಎಂಬ ಪ್ರಶ್ನೆಯೂ ಸೇರಿತ್ತು.
ಆ ಪ್ರಶ್ನೆಗೆ ಒಟ್ಟಾರೆಯಾಗಿ ವಿರಳವಾಗಿ ಮೊಟ್ಟೆಗಳನ್ನು ಸೇವಿಸದವರಿಗೆ ಹೋಲಿಸಿದರೆವಾರಕ್ಕೆ 1-6 ಬಾರಿ ಮೊಟ್ಟೆಗಳನ್ನು ಸೇವಿಸಿದ ಜನರು ಅಧ್ಯಯನದ ಅವಧಿಯಲ್ಲಿ ಸಾವಿನ ಅಪಾಯವನ್ನು ಕಡಿಮೆ ಹೊಂದಿದ್ದರು.(ಹೃದಯ ಕಾಯಿಲೆಯಿಂದ ಸಾವನ್ನಪ್ಪುವವರಿಗೆ 29 ಪ್ರತಿಶತ ಕಡಿಮೆ ಮತ್ತು ಒಟ್ಟಾರೆ ಸಾವುಗಳಿಗೆ 17 ಪ್ರತಿಶತ ಕಡಿಮೆ)
ಒಂದು ದಿನದಲ್ಲಿ ಎಷ್ಟು ಮೊಟ್ಟೆಗಳನ್ನು ತಿನ್ನುವುದು ಸರಿ?
ತಜ್ಞರ ಪ್ರಕಾರ, ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಎರಡರಿಂದ ಮೂರು ಮೊಟ್ಟೆಗಳನ್ನು ಸೇವಿಸಬೇಕು. ಆರೋಗ್ಯವಂತ ವ್ಯಕ್ತಿಯೊಬ್ಬರು ವಾರಕ್ಕೆ 7 ರಿಂದ 10 ಮೊಟ್ಟೆಗಳನ್ನು ಸೇವಿಸಬಹುದು. ಕ್ರೀಡಾಪಟುಗಳು ಅಥವಾ ವ್ಯಾಯಾಮ ಮಾಡುವವರಿಗೆ ಹೆಚ್ಚಿನ ಪ್ರೋಟೀನ್ ಅಗತ್ಯವಿರುತ್ತದೆ. ಆದ್ದರಿಂದ ಅಂತಹ ಜನರು ನಾಲ್ಕರಿಂದ ಐದು ಮೊಟ್ಟೆಗಳನ್ನು ತಿನ್ನಬಹುದು. ಪ್ರತಿದಿನ ಮೊಟ್ಟೆಗಳನ್ನು ಸೇವಿಸುವವರು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನಬೇಕು. ಇದಲ್ಲದೆ ಹೃದಯ ಕಾಯಿಲೆಯಿಂದ ಬಳಲುತ್ತಿರುವವರು ದಿನಕ್ಕೆ ಎರಡು ಮೊಟ್ಟೆಗಳಿಗಿಂತ ಹೆಚ್ಚು ತಿನ್ನಬಾರದು. ಮೊಟ್ಟೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುತ್ತದೆ ಆದರೆ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮೊಟ್ಟೆಗಳ ಸೇವನೆಯನ್ನು ಕಡಿಮೆ ಮಾಡಬೇಕು ಅಥವಾ ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು.
ಮೊಟ್ಟೆಗಳ ಸೇವೆನೆಯಿಂದಾಗು ಪ್ರಯೋಜನ
- ಚರ್ಮ, ಕೂದಲು ಮತ್ತು ಉಗುರುಗಳಿಗೆ ಪ್ರಯೋಜನಕಾರಿ.
- ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
- ದೃಷ್ಟಿ ಸುಧಾರಿಸುತ್ತದೆ
- ಸ್ಮರಣಶಕ್ತಿ ಸುಧಾರಿಸುತ್ತದೆ
- ಮೂಳೆಗಳನ್ನು ಬಲಪಡಿಸುತ್ತದೆ
- ಸ್ನಾಯುಗಳನ್ನು ಸರಿಪಡಿಸುತ್ತದೆ
- ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ
ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips