ಈ ಕಾಯಿಲೆಯಿಂದ ಬಳಲುತ್ತಿರುವವರು ಪನೀರ್​ ಸೇವಿಸಬಾರದು; ನಿಮಗಾಗಿ ಹೆಲ್ತಿ ಮಾಹಿತಿ | Health Tips

Untitled design - 2025-03-29T203341.948
Published on

ಪನೀರ್​​ ಅನ್ನು ತಿನ್ನಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಡೈರಿ ಉತ್ಪನ್ನವಾಗಿರುವ ಪನೀರ್​​ನಲ್ಲಿ ಕ್ಯಾಲ್ಸಿಯಂ, ರಂಜಕ, ಸೆಲೆನಿಯಮ್ ಮತ್ತು ಫೈಬರ್ ಸಮೃದ್ಧವಾಗಿರುತ್ತದೆ. ಪನೀರಿನಿಂದ ರುಚಿಕರವಾದ ಅನೇಕ ಖಾದ್ಯಗಳನ್ನು ಮಾಡಬಹುದು. ನಾನ್​ವೆಜ್​​​ ತಿನ್ನದವರು ಪನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.(Health Tips)

​ಆದರೆ ಕೆಲವು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಪನೀರನ್ನು ತಿನ್ನುವ ಮೊದಲು ಆಲೋಚಿಸಿ. ಏಕೆಂದರೆ ಅದು ಜೀವಕ್ಕೆ ಸಂಚುಕಾರಿಯಾಗಬಹುದು. ಈ ಕಾಯಿಲೆ ಇರುವ ಜನರು ಪನೀರ್​ ತಿನ್ನುವುದನ್ನು ತಪ್ಪಿಸುವುದು ಉತ್ತಮ. ಹಾಗಾದ್ರೆ ಯಾವ ರೋಗಗಳಿಗೆ ಪನೀರ್​ ಸೇವನೆ ವಿಷಕಾರಿ ಎಂದು ಪರಿಗಣಿಸಲಾಗುವುದು ಎಂದು ಇಲ್ಲಿ ತಿಳಿಸಲಾಗಿದೆ.

ರಕ್ತದೊತ್ತಡ ಇರುವವರು

ಅಧಿಕ ರಕ್ತದೊತ್ತಡಕ್ಕೆ ಔಷಧಿಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿರುವವರು ಪನೀರ್​​ ಸೇವಿಸಬಾರದು. ಏಕೆಂದರೆ ಪನೀರ್​ನಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಮತ್ತು ಉಪ್ಪು ಇರುತ್ತದೆ. ಇದರ ಅತಿಯಾದ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ರಕ್ತನಾಳಗಳು ಬ್ಲಾಕ್ ಆಗುತ್ತದೆ ಹಾಗೂ ಬಿಪಿ ಹೆಚ್ಚಾಗುತ್ತದೆ.

ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರು

ಆಹಾರ ಜೀರ್ಣವಾಗದೆ ತೊಂದರೆ ಅನುಭವಿಸುತ್ತಿರುವವರು ಪನೀರ್​ ಅನ್ನು ಅವಾಯ್ಡ್​ ಮಾಡಿ. ಅದು ನಿಮಗೆ ವಿಷಕ್ಕೆ ಸಮನಾಗಿರುತ್ತದೆ. ಪನೀರ್​ ಕಡಿಮೆ ಪ್ರಮಾಣದ ಫೈಬರ್​​ ಅನ್ನು ಹೊಂದಿರುತ್ತದೆ. ಇದರಿಂದ ಸುಲಭವಾಗಿ ಜೀರ್ಣವಾಗುವುದಿಲ್ಲ. ಅದರಲ್ಲೂ ಇಂಥವರು ರಾತ್ರಿ ಮಲಗುವ ಮುನ್ನ ಪನೀರ್​ ತಿನ್ನುವುದನ್ನು ತಪ್ಪಿಸಬೇಕು.

ಮೂತ್ರಪಿಂಡದ ಸಮಸ್ಯೆ

ಮೂತ್ರಪಿಂಡ ಸಮಸ್ಯೆಯಿರುವ ರೋಗಿಗಳು ಹೆಚ್ಚಿನ ಪ್ರೋಟೀನ್ ಮತ್ತು ರಂಜಕ ಹೊಂದಿರುವ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. ಏಕೆಂದರೆ ಇದು ಕ್ಯಾಲ್ಸಿಯಂ ಕಡಿಮೆಯಾಗುವಂತೆ ಮಾಡುತ್ತದೆ. ಪನೀರ್​​ ವಿಷಯದಲ್ಲೂ ಅಷ್ಟೆ, ಹೆಚ್ಚು ಪ್ರಮಾಣದಲ್ಲಿ ಪನೀರ್​ ಸೇವನೆಯು ಮೂತ್ರಪಿಂಡ ಕಾರ್ಯನಿರ್ವಹಿಸುವ ಮೇಲೆ ಪರಿಣಾಮ ಬೀರುತ್ತದೆ.

ಅತಿಸಾರವಿದ್ದಾಗ

ಅತಿಸಾರವಿದ್ದಾಗ ಪನೀರ್​​ ತಿನ್ನಬೇಡಿ. ಅತಿಯಾಗಿ ಪನೀರ್​​​ ತಿನ್ನುವುದು ಅತಿಸಾರದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ತೀವ್ರವಾದ ಅತಿಸಾರವು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಒಂದು ಸಮಸ್ಯೆ ಹಲವು ರೋಗಕ್ಕೆ ದಾರಿಮಾಡಿಕೊಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net