

ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಏನು ಮಾಡಬೇಕು ಎಂದು ಆಲೋಚಿಸುತ್ತಿದ್ದೀರಾ. ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ತಿಳಿಯದೆ ಗೊಂದಲದಲ್ಲಿದ್ದೀರಾ? ನಿಮಗಾಗಿ ಇಲ್ಲಿ ಸಿಂಪಲ್ ವಿಧಾನವನ್ನು ತಿಳಿಸಲಾಗಿದೆ. ಈ ಆಹಾರವನ್ನು ಮಧ್ಯಾಹ್ನದ ಊಟದಲ್ಲಿ ಸೇವಿಸುವುದರಿಂದ ವಾರದಲ್ಲಿ 2 ಕೆಜಿ ತೂಕವನ್ನು ಕಳೆದುಕೊಳ್ಳಬಹುದು.(Health Tips)
ತೂಕ ಇಳಿಕೆಗೆ ಯಾವುದೇ ಒಂದು ಊಟವು ಪರಿಣಾಮಕಾರಿಯಾಗುವುದಿಲ್ಲ ಎಂಬುದನ್ನು ಸಹ ನೆನಪಿನಲ್ಲಿಡಿ. ಉಪಹಾರ, ಊಟ ಮತ್ತು ಭೋಜನವನ್ನು ಸಂಯೋಜಿಸುವ ಮೂಲಕ ನೀವು ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಆಗ ಮಾತ್ರ ತೂಕ ಇಳಿಕೆ ಮಾಡಬಹುದು. ತೂಕ ಇಳಿಸುವ ಸಮಯದಲ್ಲಿ ನೀವು ಸುಲಭವಾಗಿ ಅನ್ನವನ್ನು ತಿನ್ನಬಹುದು. ತೂಕ ಇಳಿಸಿಕೊಳ್ಳಲು ಮಧ್ಯಾಹ್ನದ ಊಟದಲ್ಲಿ ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಅನ್ನ ಸೇವಿಸುವುದರಿಂದಲೂ ತೂಕ ಇಳಿಕೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯವಾಗಿದೆ. ಫ್ರೈಡ್ ರೈಸ್ ಮಾಡುವಾಗ ಅದಕ್ಕೆ ಸಣ್ಣದಾಗಿ ಹೆಚ್ಚಿದ ಎಲೆಕೋಸು ಸೇರಿಸಿ. ಎಲೆಕೋಸಿನ ಸಣ್ಣ ತುಂಡುಗಳು ಅಕ್ಕಿಯಂತೆ ಕಾಣುತ್ತವೆ ಮತ್ತು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ .
ಅನ್ನದ ಜತೆಗೆ ಅಣಬೆ, ಕ್ಯಾರೆಟ್, ಹಸಿರು ಬಟಾಣಿ ಮತ್ತು ಹಸಿರು ಈರುಳ್ಳಿಯಂತಹ ಕಡಿಮೆ ಕ್ಯಾಲೋರಿ ತರಕಾರಿಗಳನ್ನು ಸೇರಿಸಿ ಸೇವಿಸಬೇಕು. ಈ ತರಕಾರಿಗಳು ಅನ್ನವನ್ನು ಆರೋಗ್ಯಕರ ಮತ್ತು ಪೌಷ್ಟಿಕಾಂಶವನ್ನಾಗಿ ಮಾಡಲು ಸಹಾಯ ಮಾಡುತ್ತದೆ. ನೀವು ಅದರೊಳಗೆ ಬ್ರೊಕೊಲಿಯ ಕೆಲವು ತುಂಡುಗಳನ್ನು ಕೂಡ ಸೇರಿಸಬಹುದು.