ಸ್ವಾಸ್ಥ್ಯ ಸಂಕಲ್ಪ ದಿನಾಚರಣೆ

05
Published on

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ವಿದ್ಯಾರ್ಥಿವಿದ್ಯಾರ್ಥಿನಿಯರಿಗಾಗಿ ತಾಲೂಕುಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಬುಧವಾರ ಕುಂತೂರು ಪದವು ಸಂತ ಜಾರ್ಜ್ ಪ್ರೌಢಶಾಲೆಯಲ್ಲಿ ನಡೆಯಿತು.

ತಾಲೂಕು ಜನಜಾಗೃತಿ ಅಧ್ಯಕ್ಷ ಮಹೇಶ್ ಕೆ.ಸವಣೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂತ ಜಾರ್ಜ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಹರಿಶ್ಚಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು. ಪೆರಾಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಹೇಮಲತಾ ಪ್ರದೀಪ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಲಂಕಾರು ವಲಯ ಸದಸ್ಯರಾದ ಬಾಬು ಕೆ.ಎಸ್., ಪದವು ಪ್ರಗತಿಬಂಧು ಸ್ವ-ಸಹಾಯ ಸಂಘ ಒಕ್ಕೂಟ ಅಧ್ಯಕ್ಷ ನೀಲಯ್ಯ ಗೌಡ ಮೊದಲಾದವರಿದ್ದರು. ಶಿಕ್ಷಕಿ ತ್ರೇಸಿಯಮ್ಮ ಸ್ವಾಗತಿಸಿದರು. ಆಲಂಕಾರು ವಲಯ ಮೇಲ್ವಿಚಾರಕಿ ಸುಜಾತಾ ಬಿ. ನಿರೂಪಿಸಿದರು. ಗೀತಾ ಕೆ. ಸಹಕರಿಸಿದರು. ಸವಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net