

ರಾಣೆಬೆನ್ನೂರ: ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆಯಬೇಕು ಎಂದು ಡಾ. ಆನಂದ ದುರ್ಗದಶೀಮಿ ಹೇಳಿದರು.
ಇಲ್ಲಿಯ ಜೆಸಿಐ ಘಟಕದ ವತಿಯಿಂದ ಜೆಸಿವೀಕ್‌ನ ಪ್ರಥಮ ದಿನದ ಕಾರ್ಯಕ್ರಮ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಆರೋಗ್ಯ ಪದ್ಧತಿ ಬಹಳಷ್ಟು ಮಹತ್ವವಾಗಿದೆ. ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ಆರೋಗ್ಯದ ಜೀವನ ಶೈಲಿ ಮೇಲೆ ಅತ್ಯಂತ ಪರಿಣಾಮಕಾರಿ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಆಗಾಗ ಆರೋಗ್ಯದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬಡವರಿಗೆ ಇಂತಹ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಲಿದೆ. ಸಂಘ-ಸಂಸ್ಥೆಗಳು ಇನ್ನೂ ಹೆಚ್ಚಿನ ರೀತಿ ಬಡ ಜನರಿಗೆ ಸೇವೆಯನ್ನು ಒದಗಿಸಬೇಕು ಎಂದರು.
ಜೆಸಿ ಘಟಕದ ಅಧ್ಯಕ್ಷೆ ಲಕ್ಷ್ಮೀ ಅಡಕಿ ಅಧ್ಯಕ್ಷತೆ ವಹಿಸಿದ್ದರು.
ಜೆಸಿ ಪೂರ್ವಧ್ಯಕ್ಷ ಪ್ರಕಾಶ ಗಚ್ಚಿನಮಠ, ಪ್ರಭು ಎಳೆಹೂಳೆ, ವೆಂಕಟೇಶ ಕಾಕಿ, ಸಾಯಿನಾಥ, ಪ್ರಕಾಶ ಬನ್ನಿಕೋಡ, ಅಶೋಕ ದುರ್ಗದಶೀಮಿ, ಕುಮಾರ ಬೆಣ್ಣಿ ಮತ್ತಿತರರು ಉಪಸ್ಥಿತರಿದ್ದರು.