ಬ್ರೇಕಿಂಗ್ ನ್ಯೂಸ್​: ಒಂದು ವಾರ ಕರ್ನಾಟಕ ಬಂದ್​- ಆರೋಗ್ಯ ತುರ್ತುಪರಿಸ್ಥಿತಿ: ಸಿಎಂ ಯಡಿಯೂರಪ್ಪ ಅವರ ಪತ್ರಿಕಾಗೋಷ್ಠಿ ವಿಡಿಯೋ ಇಲ್ಲಿದೆ..

bsy
Published on

ಬೆಂಗಳೂರು: ಕರೋನಾ ವೈರಸ್ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಲ್ಲಿ ಒಂದು ವಾರ ಕಾಲ ಯಾವುದೇ ಸಭೆ, ಸಮಾರಂಭ ಇನ್ಯಾವುದೇ ಚಟುವಟಿಕೆಗಳು ನಡೆಯಲ್ಲ. ಶಾಲೆ, ಕಾಲೇಜು ಸೇರಿ ಯಾವುದೇ ಕಚೇರಿ ಕೆಲಸಗಳು ಕೂಡ ಇರದು. ಮದುವೆ ಮತ್ತು ಇತರೆ ಸಮಾರಂಭಗಳನ್ನೂ ಮುಂದೂಡಬೇಕು. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣವಾಗಿ ಬಂದ್ ಆಚರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಅಪರಾಹ್ನ ತುರ್ತು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿಗೆ ರಜೆ ರದ್ದುಗೊಳಿಸಲಾಗಿದ್ದು, ವಾರದ ರಜೆಯೂ ಇಲ್ಲದಂತೆ ಕೆಲಸಕ್ಕೆ ಸಜ್ಜಾಗಬೇಕು. ಐಟಿ-ಬಿಟಿ ಕಂಪನಿಗಳು ಎಲ್ಲ ಸಿಬ್ಬಂದಿಗೆ ವರ್ಕ್​ ಫ್ರಂ ಹೋಮ್​ ಅವಕಾಶ ನೀಡಬೇಕು. ವಿವಿಧ ಎಕ್ಸ್​ಪೋ, ಸಮ್ಮರ್ ಕ್ಯಾಂಪ್​, ಸಭೆ, ಸಮಾರಂಭ ಎಲ್ಲವೂ ರದ್ದುಗೊಳಿಸಬೇಕು. ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್​, ನೈಟ್​ ಕ್ಲಬ್​ಗಳು, ಚಲನಚಿತ್ರ ಮಂದಿರ, ಮಾಲ್​ಗಳು ಬಂದ್​. ಆದರೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಎಂದಿನಂತೆ ನಡೆಯಲಿವೆ ಎಂದು ಸರ್ಕಾರ ಹೇಳಿದೆ.

ಕಲಬುರಗಿಯಲ್ಲಿ ಸೋಂಕು ಪೀಡಿತ ವ್ಯಕ್ತಿಯ ನಿಧನದ ಕಾರಣ ಶುಕ್ರವಾರ ಮಧ್ಯಾಹ್ನ ತುರ್ತುಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಆರೋಗ್ಯ ಇಲಾಖೆಯ ಶಿಫಾರಸಿನ ಮೇರೆಗೆ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net