ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಮಹಾಸಭೆ : ಲಿಫ್ಟ್ ಉದ್ಘಾಟನೆ, ಆರೋಗ್ಯ ಉಚಿತ ತಪಾಸಣಾ ಶಿಬಿರ

New Project (14)
Published on

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ, ಲಿಫ್ಟ್ ಉದ್ಘಾಟನೆ ಮತ್ತು ಆರೋಗ್ಯ ಉಚಿತ ತಪಾಸಣಾ ಶಿಬಿರ ಶುಕ್ರವಾರ ನಡೆಯಿತು.

ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಲಿಫ್ಟ್ ಲೋಕಾರ್ಪಣೆ ಮಾಡಿದರು. ಅಶ್ವಿನಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮುರಳಿಧರ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಸ್ತುತ 6,648 ಸದಸ್ಯರನ್ನು ಹೊಂದಿದ್ದು, 552 ಕೋಟಿ 90 ಲಕ್ಷ ರೂ. ವ್ಯವಹಾರ ನಡೆಸಿ, 1 ಕೋಟಿ 90 ಲಕ್ಷ ರೂ. ಲಾಭ ಗಳಿಸಿದೆ. ಶೇ.100 ಸಾಲ ವಸೂಲಾತಿ ಮಾಡಿ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರಶಸ್ತಿ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.

ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಲಗುತ್ತು ಆಡಳಿತ ವರದಿ, ಆರ್ಥಿಕ ತಖ್ತೆಗಳ ಅಂಗೀಕಾರ, ಅಂದಾಜು ಆಯವ್ಯಯಗಳ ಅಂಗಿಕಾರ ನೀಡಿ ಅನುಮೋದನೆ ಪಡೆದುಕೊಂಡರು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಜಿನ್ನಪ್ಪ ಗೌಡ, ಜನಾರ್ದನ ಗೌಡ ಬರೆಮೇಲು, ಸುಧಾಕರ್ ಬಿ., ಉಷಾ ಅಂಚನ್, ಶೇಷಮ್ಮ, ಹರೀಶ್ ಎ., ಬಾಬು ನಾಯ್ಕ, ಭಾಸ್ಕರ ರೈ, ವಸಂತ ಎಸ್. ಉಪಸ್ಥಿತರಿದ್ದರು. ಧನುಷ್ ಪ್ರಾರ್ಥಿಸಿದರು. ರವಿಚಂದ್ರ ವಂದಿಸಿದರು. ಜಯಾನಂದ ಬಂಟ್ರಿಯಾಲ್ ನಿರೂಪಿಸಿದರು.

ಸಾಧಕರಿಗೆ ಸನ್ಮಾನ

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಡಾ.ಮುರಳಿ, ಲಿಫ್ಟ್ ವಿನ್ಯಾಸಗಾರ ನವೀನ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net