

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಆಯುಷ್ ಫೆಡರೇಶನ್ ಹಾಗೂ ಉಳವಿ ಬಸವೇಶ್ವರ ಧರ್ಮ ಫಂಡ್ ಸಂಸ್ಥೆ ವತಿಯಿಂದ ಆ. 19ರಂದು ಆಯುಷ್ ಆರೋಗ್ಯ ಶಿಬಿರ ಹಾಗೂ ಉಚಿತ ಔಷಧ ವಿತರಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಫೆಡರೇಶನ್ ಅಧ್ಯಕ್ಷ ಡಾ. ಬಿ.ಎಸ್. ಗೌಡಪ್ಪಗೌಡರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2ರವರೆಗೆ ದೇವಸ್ಥಾನ ಆವರಣದಲ್ಲಿ ಶಿಬಿರ ನಡೆಯಲಿದೆ. ಡಾ. ಗಣೇಶ ಕಬಾಡಿ, ಜಿಲ್ಲಾ ಆಯುಷ್ ಅಧಿಕಾರಿಗಳು, ಧರ್ಮ ಫಂಡ್ ಸಂಸ್ಥೆ ಧರ್ಮದರ್ಶಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಶಿಬಿರದಲ್ಲಿ ಚರ್ಮ ವ್ಯಾಧಿ, ಮಂಡಿ ನೋವು, ಅಲರ್ಜಿ, ಅಸ್ತಮಾ ಸೇರಿ ಇತರ ದೀರ್ಘ ಕಾಲದ ವ್ಯಾಧಿಗಳ ತಪಾಸಣೆ ನಡೆಸಿ ಸೂಕ್ತ ಸಲಹೆ, ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.
ಡಾ. ಮಹಾಂತಸ್ವಾಮಿ ಹಿರೇಮಠ, ಡಾ. ಸುನೀಲ ಸಿದ್ದಾಪುರ, ಡಾ. ರಾಜಶೇಖರ ರಾಜೇಶ್ವರ, ಡಾ. ಅಭಿನಂದನ ಪಾಟೀಲ, ಡಾ. ಜಬ್ಬಾರ ಬಾಬಾ, ಇತರರು ಇದ್ದರು.