

ಬೆಂಗಳೂರು: ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ನಿಂಬೆ ಹಣ್ಣಿನ ಮಹತ್ವ ಹೆಚ್ಚಿದೆ. ದೇಹದ ಹಲವಾರು ಭಾಗಗಳಲ್ಲಿ ಕಾಡುವ ಸಮಸ್ಯೆಗೆ ನಿಂಬೆ ರಸದಲ್ಲಿ ಸಾಕಷ್ಟು ರೋಗ-ಮುಕ್ತ ಗುಣಗಳಿವೆ. ಅಧಿಕ ಸಂಖ್ಯೆಯ ಜನರು ಇಂದಿಗೂ ನಿಂಬೆಯನ್ನು ಮನೆ ಔಷಧವನ್ನಾಗಿ ಬಳಸುತ್ತಾರೆ. ಕಾರಣ, ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಚರ್ಮದ ಕಾಂತಿಗೆ, ಹೊಳೆಯುವ ಕೂದಲಿಗೆ, ತುರಿಕೆಗಳಿಗೆ ಹೀಗೆ ನಾನಾ ರೋಗಕ್ಕೂ ನಿಂಬೆ ರಸವನ್ನು ಮದ್ದಾಗಿ ಉಪಯೋಗಿಸಲಾಗುತ್ತದೆ.
ನಿಂಬೆ ಹಣ್ಣನ್ನು ಜ್ಯೂಸ್ ಮಾಡಿಕೊಂಡು ಕುಡಿಯುವವರ ಸಂಖ್ಯೆಯೂ ನಮ್ಮಲ್ಲಿ ಹೆಚ್ಚಿದೆ. ಮಜ್ಜಿಗೆ, ತಂಪು ಪಾನಿಯದಂತೆ ತಣ್ಣಗಿನ ನೀರಿಗೆ ನಿಂಬೆ ರಸ, ಸಕ್ಕರೆ ಬೆರೆಸಿ ಜ್ಯೂಸ್ ಮಾಡಿಕೊಂಡು ಸೇವಿಸುತ್ತಾರೆ. ಆದರೆ, ಇದೇ ರಸವನ್ನು ಬೆಚ್ಚನೆಯ ನೀರಿನೊಂದಿಗೆ ಕುಡಿದರೆ ನಮ್ಮ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತೇ? ನಮ್ಮ ದೇಹದಲ್ಲಿನ ಹಲವು ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಹಾಗೂ ಆರೋಗ್ಯವನ್ನು ಸಮತೋಲನದಲ್ಲಿಡುವಲ್ಲಿ ನಿಂಬೆ ರಸದ ನೀರು ಎಷ್ಟು ಪ್ರಯೋಜನಕಾರಿ ಎಂಬುದರ ಮಾಹಿತಿ ಹೀಗಿದೆ ಗಮನಿಸಿ.