Stress| ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಒತ್ತಡದಲ್ಲಿ ಸಿಲುಕಿಕೊಂಡಿರುವುದನ್ನು ನಾವು ಗಮನಿಸಿರುತ್ತೇವೆ. ಇದಕ್ಕೆ ಪ್ರಮುಖ ಕಾರಣ ಅವರು ನಿತ್ಯ ಮಾಡುವ ಕೆಲಸ, ವ್ಯಾಪಾರ, ಉದ್ಯೋಗ ಹೀಗೆ ನಾನಾ ಕಾರಣಗಳಿಂದ ಎಷ್ಟೋ ಜನ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಒತ್ತಡವು ನಿಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ನಿಮ್ಮ ದೇಹ ಒತ್ತಡಕ್ಕೆ ಒಳಗಾಗುತ್ತಿದೆ ಎಂದಾಕ್ಷಣ ನಿಮಗೆ 9 ಸೂಚನೆಗಳನ್ನು ನೀಡುತ್ತದೆ. ಹಾಗಾದ್ರೆ ಈ ಒತ್ತಡವನ್ನು ನಿಭಾಯಿಸುವುದೇಗೆ ಹಾಗೂ ಒತ್ತಡವನ್ನು ನಿಯಂತ್ರಿಸಲು ನಾವು ಅನುಸರಿಸಬೇಕಾದ ಕ್ರಮಗಳೇನು ಅಂಬುದನ್ನು ತಿಳಿಯೋಣ.
ಆಧುನಿಕ ಜೀವನದಲ್ಲಿ ಒತ್ತಡವು ಅನಿವಾರ್ಯವೇ ಆಗಿದೆ. ಈ ಅಲ್ಪಾವಧಿಯ ಒತ್ತಡವು ಆತಂಕಕಾರಿಯಲ್ಲದಿದ್ದರೂ, ದೀರ್ಘಕಾಲದ ಒತ್ತಡವು ಗಮನಾರ್ಹ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ಘಿಬ್ಲಿ ಎಫೆಕ್ಟ್; ChatGPT ಬಳಕೆಯಲ್ಲಿ ದಾಖಲೆಯ ಏರಿಕೆ! ಈ ವರ್ಷದಲ್ಲಿ 150 ಮಿಲಿಯನ್ ಜನರಿಂದ ಬಳಕೆ;ChatGPT
ಹೆಚ್ಚಿನ ಒತ್ತಡ ಮಟ್ಟ ಸೂಚಿಸುವ 9 ಸೂಚನೆಗಳು:
1. ನಿರಂತರ ಹೊಟ್ಟೆಯ ತೂಕ
ನಿಮ್ಮ ದೇಹದಲ್ಲಿ ಹೊಟ್ಟೆಯ ಭಾರ ಕಂಡುಬಂದರೆ ನೀವು ಒತ್ತಡಕ್ಕೊಳಗಾಗಿದ್ದೀರಿ ಎಂಬುವುದನ್ನು ಕಂಡುಕೊಳ್ಳಬಹುದು. ವ್ಯಾಯಾಮ ಮತ್ತು ಸಮತೋಲಿತ ಆಹಾರದ ಸೇವನೆಯ ನಡುವೆಯೂ ಹೊಟ್ಟೆಯ ಕೊಬ್ಬು ಹೆಚ್ಚಾಗಿ ಕಂಡುಬಂದರೆ ನೀವು stressನಲ್ಲಿದ್ದೀರಿ ಎಂಬುದನ್ನು ತಿಳಿಸುತ್ತದೆ. ಆ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಹೆಚ್ಚಿದ ಕಾರ್ಟಿಸೋಲ್ ಹೊಟ್ಟೆಯಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ.
2. ದೀರ್ಘಕಾಲದ ಆಯಾಸ
ಸಾಕಷ್ಟು ವಿಶ್ರಾಂತಿ ಪಡೆದ ನಂತರವೂ ನಿರಂತರ ಆಯಾಸವನ್ನು ಅನುಭವಿಸುವುದು ದೀರ್ಘಕಾಲದ ಒತ್ತಡದ ಸಂಕೇತವಾಗಿರಬಹುದು. ಒತ್ತಡವು ನಿದ್ರೆಗೆ ಅಡ್ಡಿಪಡಿಸುವುದರಿಂದ ಇದು ನಿರಂತರ ಆಯಾಸಕ್ಕೆ ಕಾರಣವಾಗುತ್ತದೆ.
3. ಕೂದಲು ಉದುರುವುದು
ಒತ್ತಡದ ಪರಿಣಾಮದಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ ಮತ್ತು ಕಾಲಾನಂತರದಲ್ಲಿ ಗಮನಾರ್ಹವಾಗಿ ತೆಳುವಾಗುವುದು ಕಂಡುಬರುತ್ತದೆ.
4. ಸಿಹಿ ಮತ್ತು ಕೊಬ್ಬಿನ ಆಹಾರದ ಬಯಕೆ
ಹೆಚ್ಚಿನ ಒತ್ತಡದ ಮಟ್ಟವು ದೇಹಕ್ಕೆ ಸಕ್ಕರೆ ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುವ ಆರಾಮದಾಯಕ ಆಹಾರಗಳನ್ನು ಕೇಳುತ್ತದೆ. ಇದರಿಂದ ದೇಹವು ಒತ್ತಡವನ್ನು ಎದುರಿಸಲು ಮತ್ತು ಆಹ್ಲಾದಕರ ಸಂವೇದನೆಗಳನ್ನು ಹುಡಕಲು ಪ್ರಯತ್ನಿಸುತ್ತದೆ.
5. ಮುಖದ ಊತ
ಒತ್ತಡದಿಂದ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳು ದೇಹದಲ್ಲಿ ನೀರು ಶೇಖರಣೆಯಾಗಲು ಕಾರಣವಾಗಬಹುದು. ಇದು ಮುಖದಲ್ಲಿ ಊದಿಕೊಳ್ಳುವುದು ಅಥವಾ ಊದಿಕೊಂಡಂತೆ ಕಾಣುವಂತೆ ಮಾಡುತ್ತದೆ.
6. ಕಿರಿಕಿರಿ
ಅಸಾಮಾನ್ಯವಾಗಿ ಕಿರಿಕಿರಿ ಅನುಭವಿಸುವುದು ಅಥವಾ ಸ್ಪಷ್ಟ ಕಾರಣವಿಲ್ಲದೆ ಮನಸ್ಥಿತಿಯಲ್ಲಿ ಬದಲಾವಣೆಗಳನ್ನು ಅನುಭವಿಸುವುದು ಒತ್ತಡಕ್ಕೆ ಒಳಗಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ.
7. ಕತ್ತಿನ ಸ್ನಾಯುಗಳಲ್ಲಿ ಒತ್ತಡ
ದೀರ್ಘಕಾಲದ ಒತ್ತಡವು ಸಾಮಾನ್ಯವಾಗಿ ದೈಹಿಕವಾಗಿ ಸ್ನಾಯುಗಳ ಒತ್ತಡವಾಗಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಕುತ್ತಿಗೆ ಮತ್ತು ಭುಜಗಳಲ್ಲಿ ಇದು ಅಸ್ವಸ್ಥತೆ ಮತ್ತು ಬಿಗಿತಕ್ಕೆ ಕಾರಣವಾಗುತ್ತದೆ.
8. ಬೆಳಗಿನ ಜಾವದಲ್ಲಿ ಆಗಾಗ್ಗೆ ಎಚ್ಚರಗೊಳ್ಳುವುದು
ನಿಯಮಿತವಾಗಿ ಬೆಳಗಿನ ಜಾವ 2 ರಿಂದ 3 ಗಂಟೆಗೆ ಏಳುವುದರಿಂದ ಒತ್ತಡದ ಮಟ್ಟ ಹೆಚ್ಚಾಗುತ್ತದೆ. ಏಕೆಂದರೆ ಒತ್ತಡವು ದೇಹದ ನೈಸರ್ಗಿಕ ನಿದ್ರೆಯ ಎಚ್ಚರ ಚಕ್ರವನ್ನು ಅಡ್ಡಿಪಡಿಸಬಹುದು.
9. ಕಡಿಮೆಯಾಗಿದ ಕಾಮಾಸಕ್ತಿ
ದೀರ್ಘಕಾಲದ ಒತ್ತಡವು ಲೈಂಗಿಕ ಬಯಕೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು. ಇದು ಸಂತಾನೋತ್ಪತ್ತಿ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ ಮತ್ತು ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.
ಒತ್ತಡವನ್ನು ಕಡಿಮೆ ಮಾಡುವುದೇಗೆ?

ಸಮತೋಲಿತ ಆಹಾರದ ಪೋಷಣೆ
ನಿಯಮಿತ ಸಮಯದಲ್ಲಿ ಊಟ ಸೇವನೆ
ಹೆಚ್ಚಿನ ನೀರು ಸೇವನೆ ಮಾಡುವುದು
ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸೇವಿಸುವುದು
ಸಂಸ್ಕರಿಸಿದ ಆಹಾರಗಳನ್ನು ಮಿತಿಗೊಳಿಸುವುದು
ನಿತ್ಯ ಸ್ವಲ್ಪ ಸಮಯ ಧ್ಯಾನ ಮಾಡುವುದು
(ಏಜೆನ್ಸೀಸ್)
ಘಿಬ್ಲಿ ಎಫೆಕ್ಟ್; ChatGPT ಬಳಕೆಯಲ್ಲಿ ದಾಖಲೆಯ ಏರಿಕೆ! ಈ ವರ್ಷದಲ್ಲಿ 150 ಮಿಲಿಯನ್ ಜನರಿಂದ ಬಳಕೆ;ChatGPT