ಮುಂಬೈ: ಮುಂದಿನ ವರ್ಷ ಅಂದರೆ 2025ರಲ್ಲಿ ನಡೆಯಲಿರುವ ಐಪಿಎಲ್ಗೆ (IPL) ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದ್ದು, ರಿಟೇನ್ (Retain) ನಿಯಮವನ್ನು ಬಿಸಿಸಿಐ ಪ್ರಕಟಿಸಿದೆ. ಈ ತಿಂಗಳ ಅಂತ್ಯಕ್ಕೆ ರಿಟೇನ್ ಪಟ್ಟಿಯನ್ನು ಫ್ರಾಂಚೈಸಿಗಳು ಬಿಸಿಸಿಐಗೆ ಸಲ್ಲಿಸಬೇಕಿದ್ದು, ಇದಾದ ಬಳಿಕ ವರ್ಷಾಂತ್ಯದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ರಿಟೇನ್ಗೆ ಸಂಬಂಧಿಸಿದಂತೆ ಈಗಾಗಲೇ ಒಂದಿಲ್ಲೊಂದು ಸುದ್ದಿಗಳು ವೈರಲ್ ಆಗುತ್ತಿದ್ದು, ಇದರಲ್ಲಿ ಆಟಗಾರರ ಸಂಭಾವನೆ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ.
ಮೆಗಾ ಹರಾಜಿನಲ್ಲಿ ಲಖನೌ ಸೂಪರ್ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಭಾರೀ ಮೊತ್ತವನ್ನು ಪಡೆಯಲಿದ್ದು, ಈ ವಿಚಾರ ಎಲ್ಲರ ಅಚ್ಚರಿಗೆ ಕಾರಣವಾಗುತ್ತದೆ. ವಿರಾಟ್ ಕೊಹ್ಲಿ, ಬುಮ್ರಾ, ರೋಹಿತ್ ಕೂಡ ಈ ಮೊತ್ತವನ್ನು ಪಡೆಯುವುದಿಲ್ಲವೆಂದು ಹೇಳಿದ್ದು, ಈ ಬಗ್ಗೆ ಕಾರಣವನ್ನು ಸಹ ವಿವರಿಸಿದ್ದಾರೆ.
ಇದನ್ನೂ ಓದಿ: BiggBoss ಶುರುವಾದ ಎರಡನೇ ದಿನಕ್ಕೆ ಇಬ್ಬರು ಸ್ಫರ್ಧಿಗಳ ನಡುವೆ ಕುಚ್ ಕುಚ್
ಈ ಕುರಿತು ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ನನ್ನ ಪ್ರಕಾರ ಕೆ.ಎಲ್. ರಾಹುಲ್ರನ್ನು ರಿಟೇನ್ ಮಾಡಿಕೊಂಡರೆ ದೊಡ್ಡ ಮೊತ್ತ ಸಿಗುವುದು ಡೌಟ್. ಆದರೆ. ಆತ ಏನಾದರೂ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ 18 ಕೋಟಿಗೂ ಹೆಚ್ಚಿನ ಮೊತ್ತವನ್ನು ಪಡೆಯಲಿದ್ದಾನೆ. ನನ್ನ ಪ್ರಕಾರ ಆತನನ್ನು ಲಖನೌ ತಂಡ ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂದು ಭಾವಿಸಿದ್ದೇನೆ. ಈ ಬಗ್ಗೆ ಕಾದು ನೋಡಬೇಕಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ಶುಲ್ಕವನ್ನು ಪರಿಚಯಿಸಲಾಗಿದೆ. ಪ್ಲೇಯಿಂಗ್ 11ರ ಸದಸ್ಯರು (ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ) ಪ್ರತಿ ಪಂದ್ಯಕ್ಕೆ INR 7.5 ಲಕ್ಷಗಳ ಮ್ಯಾಚ್ ಫೀಯನನ್ನು ಪಡೆಯಲಿದ್ದಾರೆ. ಇದಲ್ಲದೆ ವಿದೇಶಿ ಆಟಗಾರರಿಗಾಗಿ ಹೊಸ ನಿಯಮ ತಂದಿರುವ ಬಿಸಿಸಿಐ ಇದನ್ನು ಪಾಲಿಸದಿದ್ದರೆ ಎರಡು ವರ್ಷ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.