

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ಸಂಬಂಧಿಸಿದಂತೆ ತಾನು ಎಸಗಿದ ಸ್ವಯಂಕೃತ ಅಪರಾಧಕ್ಕೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಇದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಯಾರೋ ಚುನಾವಣಾ ತಂತ್ರಗಾರರ ಮಾತು ಕೇಳಿಕೊಂಡು ಗ್ಯಾರಂಟಿ ಮಾಡಿದಾಗ, ಯೋಜನೆ ಜಾರಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕಾಗಿತ್ತು. ಅಕ್ಕಿ ಗ್ಯಾರಂಟಿ ಕೊಡುವ ಮುನ್ನ ಇವರೇನು ಕೇಂದ್ರ ಸರ್ಕಾರ್ಕಕೆ ಪತ್ರ ಬರೆದಿದ್ರಾ. ಸುಳ್ಳು ಭರವಸೇ ಕೊಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ಧಾರೆ.
ಕೇಂದ್ರ ಸರ್ಕಾರ ಯಾಕೆ ಅಕ್ಕಿ ಕೊಡಬೇಕು ನೀವು ಗ್ಯಾರಂಟಿ ಘೋಷಣೆ ಮಾಡುವ ಮುನ್ನ ಅವರಿಗೆ ಪತ್ರ ಬರೆದು ಖಾತ್ರಿ ಮಾಡಿಕೊಂಡಿದ್ರಾ. ಯಾರೋ ಚುನಾವಣಾ ತಂತ್ರಗಾರ ಐಡಿಯಾ ಕೊಟ್ಟ ಎಂದು ನೀವು ಫ್ರೀ ಫ್ರೀ ಎಂದು ಘೋಷಿಸಿದ್ದೀರಿ. ನನಗೂ ಫ್ರೀ, ನಿನಗೂ ಫ್ರೀ ಎಂದು ಅರ್ಜಿ ಹಾಕಲು ಹೇಳಿದ್ದೀರಿ. ಈಗ ನೋಡಿದರೆ ವರಸೆ ಬದಲಾಯಿಸಿದ್ದದೀರಿ ಎಂದು ಕಿಡಿಕಾರಿದ್ಧಾರೆ.
ಗೃಹಜ್ಯೋತಿ ಯೋಜನೆ ರಾಜ್ಯದ ಜನತೆಗೆ ಕತ್ತಲಾಗಿ ಪರಿಣಮಿಸಲು ಶುರುವಾಗಿದೆ. ವಿಟಿಯು ಕುಲಪತಿ ವಿದ್ಯುತ್ ಬಿಲ್ ನೋಡಿ ಬಾಯಿ ಬಡ್ಕೋತ್ತಿದ್ಧಾರೆ. ಬಿಲ್ನ ಮೊತ್ತ ಕಂಡು ಶಾಕ್ಗೆ ಗುರಿಯಾಗಿದ್ಧಾರೆ. ಉಚಿತ ವಿದ್ಯುತ್ ಎಂದು ಹೇಳಿಕೊಳ್ಳುತ್ತ ಇನ್ನೆಷ್ಟು ಜನರಿಗೆ ಶಾಕ್ ಕೊಡುತ್ತೀರಿ ಎಂದು ಪ್ರಶ್ನಿಸಿದ್ಧಾರೆ.
ಜನತೆ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಗೆ ಬೇಸತ್ತು ಹೋಗಿದ್ಧಾರೆ. ರಾಜ್ಯದ ಜನತೆ ಅವರನ್ನು ನಂಬಿ ಮತ ಕೊಟ್ಟ ತಪ್ಪಿಗೆ ಪ್ರತಿದಿನ ಇವರ ನಾಟಕ ನೋಡಬೇಕಾಗಿದೆ. ಇವರುಗಳು ಯಾವ ರೀತಿ ಟೋಪಿ ಹಾಕುತ್ತಾರೆ ಎಂದು ನೋಡುವ ಅನಿವಾರ್ಯತೆಯನ್ನು ಜನತೆ ಮತ ನೀಡುವ ಮೂಲಕ ಸೃಷ್ಟಿಸಿಕೊಂಡಿದ್ಧಾರೆ.
ಕಾಂಗ್ರೆಸ್ನವರು ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಈಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ಧಾರೆ. ಮುಖ್ಯಮಂತ್ರಿಗಳು ನೋಡಿದರೆ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದಿದೆ. ಅವರು ಉಲ್ಟಾ ಹೊಡೆದಿದ್ದಾರೆ ಎಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಹೇಳಿಕೆ ಕೊಡುತ್ತಿದ್ಧಾರೆ. ಅಕ್ಕಿ ಬೇಕು ಎಂದಮೇಲೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸಬೇಕಿತ್ತು ಅದು ಬಿಟ್ಟು ಈ ರೀತಿ ಉಢಾಫೆ ಉತ್ತರಗಳು ಸಲ್ಲದು ಎಂದು ಹೇಳಿದ್ಧಾರೆ.
ಕೇಂದ್ರ ಸರ್ಕಾರಕ್ಕೆ ಅದರದ್ದೆ ಆದ ಕಮಿಟ್ಮೆಂಟ್ ಇರುತ್ತದೆ. ನಮಗೆ ಅಕ್ಕಿ ಬೇಕು ಎಂದರೆ ಅವರು ಹೇಗೆ ಕೊಡುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿದೆ. ಆಗ ನಾನು ಪ್ರಧಾನಿ ಅವರ ಬಳಿ ಹೋಗಿ ಕೇಳಿದ್ನಾ. ದರ್ದು ಇರೋದು ಕಾಂಗ್ರೆಸ್ ಪಕ್ಷಕ್ಕೆ ಅವರಿಗಲ್ಲ ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.