ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?

hdk-lockdown
Published on

ಬೆಂಗಳೂರು: ರಾಜಧಾನಿಯ ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಠ 20 ದಿನ‌ ಸಂಪೂರ್ಣ ಲಾಕ್​ಡೌನ್ ಮಾಡಬೇಕು. ತಪ್ಪಿದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿಗೆ ಎಚ್ಚರಿಸಿದ್ದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಟ್ವೀಟ್​ ಮಾಡಿದ್ದಾರೆ.

ದೇಶದಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಎಚ್​ಡಿಕೆ, ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ. 20 ದಿನ ದೇಶದಾದ್ಯಂತ ಮತ್ತೆ ಲಾಕ್​ಡೌನ್ ಘೋಷಿಸಬೇಕು ಎಂದು ಪ್ರಧಾನಿ ಅವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿರಿ video/ ಕರೊನಾ ವಾರ್ಡಿನಲ್ಲಿ ‘ನರಕ’ ದರ್ಶನ, ಶೌಚಗೃಹದ ನೀರನ್ನೇ ಕುಡಿದ ಸೋಂಕಿತರು!

ಸರಣಿ ಟ್ವೀಟ್ ಮಾಡಿರುವ ಎಚ್​ಡಿಕೆ, ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್​ಡೌನ್- ಲಾಕ್​ಡೌನ್ ಮಾಡಿದರೆ ಪ್ರಯೋಜನವಿಲ್ಲ.‌ ಲಾಕ್​ಡೌನ್ ತೆರವುಗೊಳಿಸಿದ ಬಳಿಕ ದೇಶದಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ದೇಶದಲ್ಲಿ ಮತ್ತೆ 20 ದಿನ ಲಾಕ್​ಡೌನ್ ಮಾಡಬೇಕು ಎಂದು ಸರ್ಕಾರಗಳನ್ನು ಆಗ್ರಹಿಸಿದ್ದಾರೆ.

ಕರೊನಾ ಪ್ರಕರಣ ಹೆಚ್ಚುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಬೆಂಗಳೂರನ್ನು ಮತ್ತೊಂದು ಬ್ರೆಜಿಲ್ ಆಗಲು ಬಿಡಬಾರದು. ಕರೊನಾ ಹರಡುವಿಕೆ ನಿಯಂತ್ರಿಸಲು ಲಾಕ್​ಡೌನ್​ ಆಗಬೇಕಿದೆ. ಬೆಂಗಳೂರನ್ನು ಕೂಡಲೇ ಸಂಪೂರ್ಣ ಲಾಕ್​ಡೌನ್​ ಮಾಡಬೇಕು. ದಿನಗೂಲಿ ಕಾರ್ಮಿಕರು, ಆಟೋ-ಕ್ಯಾಬ್​ ಚಾಲಕರಿಗೆ 5000 ರೂ. ನೀಡುವ ಮೂಲಕ ಅವರ ಕುಟುಂಬಕ್ಕೆ ನೆರವಾಗಬೇಕು ಎಂದು ಸಿಎಂ ಬಿಎಸ್​ವೈ ಅವರನ್ನೂ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net