ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ; ಐಸಿಯುನಲ್ಲಿ ಚಿಕಿತ್ಸೆ

HD Revanna
Published on

ಹಾಸನ : ಮಾಜಿ ಸಚಿವ,  ಶಾಸಕ  ಎಚ್.ಡಿ.ರೇವಣ್ಣ ಅವರು ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿ ದೇವಾಲಯದಲ್ಲಿ ಘಟನೆ ನಡೆದಿದೆ. ಏಕಾದಶಿ ಪ್ರಯುಕ್ತ ಉಪವಾಸವಿದ್ದು, ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪೂಜೆ ಸಲ್ಲಿಸಿ ಬರುವಾಗ ಜಾರಿ ಬಿದಿದ್ದು, ಪಕ್ಕೆಲುಬುಗೆ ಪೆಟ್ಟಾಗಿದೆ.

ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬರುವ ವೇಳೆ ಜಾರಿ ಬಿದ್ದಿದ್ದಾರೆ. ಹರದನಹಳ್ಳಿಯಿಂದ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಹೊರಟಿದ್ದರು ಈ ವೇಳೆ ಘಟನೆ ನಡೆದಿದೆ. 

ತೀವ್ರ ಪಕ್ಕೆಲುಬು ನೋವಿನ ಹಿನ್ನೆಲೆ  ಹೊಳೆನರಸೀಪುರದ ತಾಲೂಕು ಆಸ್ಪತ್ರೆಗೆ ಎಚ್.ಡಿ.ರೇವಣ್ಣ ಅವರನ್ನು ದಾಖಲು ಮಾಡಲಾಗಿದೆ. ಉಪವಾಸ ಹಾಗೂ ತೀವ್ರ ಪಕ್ಕೆಲುಬು ನೋವಿನ ಕಾರಣ ಸುಸ್ತಾಗಿದ್ದಾರೆ. ಎಚ್.ಡಿ.ರೇವಣ್ಣಗೆ  ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net