ಉಪ ಚುನಾವಣೆಗೆ ಜೆಡಿಎಸ್ ರೆಡಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

hdk
Published on

ಬೆಂಗಳೂರು: ಶಾಸಕರಿಬ್ಬರ ಅಕಾಲಿಕ ಮರಣದಿಂದ ತೆರವಾಗಿರುವ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿರುವುದನ್ನು ಜೆಡಿಎಸ್ ಸ್ವಾಗತಿಸಿದ್ದು, ಸಾಮೂಹಿಕ ನಾಯಕತ್ವದಲ್ಲಿ ಉಪ ಸಮರ ಎದುರಿಸಲು ಪಕ್ಷ ರೆಡಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೇತಗಾನಹಳ್ಳಿಯಲ್ಲಿ ಪಕ್ಷದ ಸಂಘಟನೆ ಬಕವರ್ಧನೆಗೆ ನಡೆಯುತ್ತಿರುವ ವಿಭಿನ್ನ ಕಾರ್ಯಾಗಾರ ಸಂದರ್ಭದಲ್ಲಿ ಈ ಉಪ ಚುನಾವಣೆ ಪ್ರಕಟವಾಗಿದ್ದು ಸಂಘಟನಾತ್ಮಕವಾಗಿ ಎದುರಿಸಲು ಟಾಸ್ಕ್ ದೊರೆತಂತಾಗಿದೆ ಎಂದು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದರು.

ಹಾನಗಲ್ ಕ್ಷೇತ್ರಕ್ಕೆ ಈಗಾಗಲೇ ನಿಯಾಜ್ ಶೇಖ್ ಹೆಸರನ್ನು ಪ್ರಕಟಿಸಿದ್ದು, ಸಿಂದಗಿಗೆ ಐದು ಜನ ಆಕಾಂಕ್ಷಿಗಳಿದ್ದಾರೆ. ಕ್ಷೇತ್ರದ ಅನೇಕ ಮುಖಂಡರು, ಕಾರ್ಯಕರ್ತರು ಹಲವು ಬಾರಿ ಭೇಟಿಯಾಗಿದ್ದು, ಸಮರ್ಥರನ್ನು ಸ್ಪರ್ಧಾ ಕಣಕ್ಕೆ ಇಳಿಸಲಾಗುವುದು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net