ಈ ಮೂವರು ಇನ್ಸ್​​ಪೆಕ್ಟರ್​​ಗಳನ್ನು ಕೂಡಲೇ ವರ್ಗಾವಣೆ ಮಾಡಿ; ಚುನಾವಣಾ ಅಧಿಕಾರಿಗೆ ದೂರು ನೀಡಿದ ಮಾಜಿ ಪ್ರಧಾನಿ

H. D. Deve Gowda
Published on

ಬೆಂಗಳೂರು: ಸಾರ್ವಜನಿಕರ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ಬೆದರಿಕೆ ಹಾಕುತ್ತಿರುವ ಆರೋಪದಡಿ ಮೂವರು ಇನ್ಸ್​ಪೆಕ್ಟರ್​​ಗಳ​ ವಿರುದ್ದ ಮಾಜಿ‌ ಪ್ರಧಾನಿ ದೇವೇಗೌಡ ಅವರು ರಾಜ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ.

ಕಗ್ಗಲಿಪುರ ಠಾಣೆ ಇನ್ಸ್​ಪೆಕ್ಟರ್ ವಿಜಯಕುಮಾರ್, ತಾವರೆಕೆರೆ ಠಾಣೆ ಇನ್ಸ್​ಪೆಕ್ಟರ್ ರಾಮಪ್ಪ ಗುತ್ತೆದಾರ್ ಹಾಗೂ ತಲಘಟ್ಟಪುರ ಇನ್ಸ್​ಪೆಕ್ಟರ್ ಜಗದೀಶ್ ಅವರನ್ನು ಎತ್ತಂಗಡಿ ಮಾಡುವಂತೆ ಮಾಜಿ ಪ್ರಧಾನಿ ದೂರು ನೀಡಿದ್ದಾರೆ.

ಸ್ಥಳೀಯ ಶಾಸಕರೊಂದಿಗೆ ಒಡನಾಟ!

ಯಶವಂತಪುರ ಶಾಸಕ ಹೇಳಿದಂತೆ ಮೂವರು ಇನ್ಸ್​ಪೆಕ್ಟರ್​ಗಳು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಯಶವಂತಪುರ ಕ್ಷೇತ್ರದಲ್ಲಿ ಶಾಸಕರ ಪರವಾಗಿ ಮತ ಹಾಕುವಂತೆ ಬೆದರಿಕೆ ಹಾಕುತ್ತಿದ್ದಾರೆ. ಜನರ ವಿರುದ್ದ ಸುಳ್ಳು ಕೇಸ್ ಹಾಕಿ ದೌರ್ಜನ್ಯ ಎಸಗುತ್ತಿದ್ದಾರೆ. ಹೀಗಾಗಿ ಕೂಡಲೇ ಮೂವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳೀಯ ಶಾಸಕರೊಂದಿಗೆ ಒಡನಾಟ ಹೊಂದಿರುವ ಮೂವರು ಇನ್ಸ್​ಪೆಕ್ಟರ್​ಗಳನ್ನು ವಿಧಾನಸಭಾ ಚುನಾವಣಾ ಹಿತದೃಷ್ಠಿಯಿಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಬೇರೆಡೆಗೆ ವರ್ಗಾಯಿಸಬೇಕು. ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net