More

    ಮನೆಗೆ ಕರೊನಾ ಬರದಿರಲೆಂದು ವಾಮಾಚಾರ: ಆಕ್ರೋಶದ ಜತೆಗೆ ಆತಂಕಕ್ಕೀಡಾದ ಗ್ರಾಮಸ್ಥರು

    ಹಾವೇರಿ: ಜನರು ಎಲ್ಲಿಯವರೆಗೆ ಮೌಢ್ಯಕ್ಕೆ ಕಟ್ಟು ಬೀಳುತ್ತಾರೋ ಅಲ್ಲಿಯವರೆಗೂ ಯಾವುದೇ ಆಪತ್ತುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಜ ಭಕ್ತಿಯ ಜತೆಗೆ ವೈಜ್ಞಾನಿಕ ದೃಷ್ಟಿಕೋನವಿದ್ದರೆ ಮಾತ್ರ ಯಾವುದೇ ವೈರಸ್​ ಬರಲಿ ಯಾರನ್ನು ಏನು ಮಾಡಲಾಗದು.

    ಹೀಗೇಕೆ ಈ ಮಾತು ಅನ್ನುತ್ತೀರಾ? ಕರೊನಾ ಬಿಕ್ಕಟ್ಟು ಎಲ್ಲರಿಗೂ ಆರೋಗ್ಯ ಕ್ಷೇತ್ರದ ಮಹತ್ವ ತಿಳಿಸಿದೆ. ಮಂದಿರ, ಮಸೀದಿ, ಚರ್ಚ್​ಗಳಿಂದ ಏನು ಸಾಧ್ಯವಾಗುವುದಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇಂತಹ ಕಠಿಣ ಸಮಯದಲ್ಲಿ ಕರೊನಾ ಬಾರದಿರಲಿ ಎಂದು ವಾಮಾಚಾರದ ಮೊರೆ ಹೋಗಿರುವುದು ನಿಜಕ್ಕೂ ನಾಚಿಕೆಯ ಸಂಗತಿ.

    ಹೌದು. ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಕ್ರಾಸ್​ ಬಳಿ ಕಿಡಿಗೇಡಿಗಳು ಮಾಟ ಮಾಡಿಸಿ ಇಟ್ಟಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಗೊಂಬೆ, ನಿಂಬೆಹಣ್ಣು ಹಾಗೂ ಮೊಟ್ಟೆಯನ್ನು ಇಟ್ಟು ಹೋಗಿದ್ದಾರೆ. ಊರಿಗೆ ಬಂದರೂ ನಮ್ಮ ಮನೆಗೆ ಕೊರೊನಾ ಬಾರದಿರಲಿ, ನಮಗೆ ಅಂಟಿಕೊಂಡ ರೋಗಗಳು ದೂರವಾಗಲಿ ಎಂದು ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಇದರಿಂದ ಸಿಟ್ಟಿಗೆದ್ದ ಆಲದಕಟ್ಟಿ ಗ್ರಾಮಸ್ಥರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಯಂದು ನಡೆಯುತ್ತಿದೆ. ಇದನ್ನು ಕಂಡು ಕಂಡು ಬೇಸತ್ತು ಖುದ್ದು ಗ್ರಾಮಸ್ಥರೇ ಇದೀಗ ವಾಮಾಚಾರಕ್ಕೆ ಬೆಂಕಿ ಹಚ್ಚಿದ್ದಾರೆ. ಕಳೆದ ಇಪ್ಪತ್ತು ದಿನಗಳಿಂದ ಗ್ರಾಮದ ಕ್ರಾಸ್ ಬಳಿ ವಾಮಾಚಾರ ನಡೆಯುತ್ತಿದೆ. ಇದರಿಂದ ದುರ್ಬಲ ಮನಸ್ಸಿನ ಜನರು ಆತಂಕಕ್ಕೀಡಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬಿಎಸ್​ವೈ ವಿರುದ್ಧ ಬಿಜೆಪಿಯೊಳಗೇ ಪ್ರತಿಪಕ್ಷ; ಸಿಎಂ ಬದಲಾವಣೆ ನೆಪದಲ್ಲಿ ಕಮಲವೇ ಖೆಡ್ಡಕ್ಕೆ, ಯಡಿಯೂರಪ್ಪ ಬೆನ್ನಿಗೆ ನಿಂತ ಡೆಲ್ಲಿ ವರಿಷ್ಠರು

    PNB Scam: ದೇಶಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ

    ಹಳ್ಳಿಗಳ ಕಡೆಗೆ ಸಚಿವರ ನಡಿಗೆ: ಬಿಜೆಪಿ ಆಡಳಿತ ರಾಜ್ಯಗಳ ಸಚಿವರಿಗೆ ಸೂಚನೆ, ನಮೋ ಸರ್ಕಾರಕ್ಕೆ ಏಳು ವರ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts