PNB Scam: ದೇಶಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ

ಆಂಟಿಗುವಾ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತ ವಂಚಿಸಿ, ದೇಶಬಿಟ್ಟು ಪರಾರಿಯಾಗಿ ಆಂಟಿಗುವಾ ಮತ್ತು ಬಾರ್ಬುಡದಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಸ್ಥಳೀಯ ಪೊಲೀಸರು ಡೊಮಿನಿಕಾದಲ್ಲಿ ಬಂಧಿಸಿದ್ದಾರೆ. ಡೊಮಿನಿಕಾವು ಕೆರೆಬಿಯನ್​ ಸಮುದ್ರದ ಒಂದು ಸಣ್ಣ ದ್ವೀಪ ರಾಷ್ಟ್ರ. ಇಂಟರ್ಪೋಲ್ ನೀಡಿದ ಯೆಲ್ಲೋ ಕಾರ್ನರ್ ನೋಟಿಸ್​ ಬಳಿಕ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಪತ್ತೆಯಾಗಿದ್ದು, ಸದ್ಯ ಬಂಧನದಲ್ಲಿರುವ ಆತನನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಆಂಟಿಗುವಾ ಪೊಲೀಸರು ಡೊಮಿನಿಕಾ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮೆಹುಲ್​ ಚೋಕ್ಸಿ ಬಂಧನವಾಗಿರುವ … Continue reading PNB Scam: ದೇಶಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ