More

    PNB Scam: ದೇಶಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ

    ಆಂಟಿಗುವಾ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತ ವಂಚಿಸಿ, ದೇಶಬಿಟ್ಟು ಪರಾರಿಯಾಗಿ ಆಂಟಿಗುವಾ ಮತ್ತು ಬಾರ್ಬುಡದಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಸ್ಥಳೀಯ ಪೊಲೀಸರು ಡೊಮಿನಿಕಾದಲ್ಲಿ ಬಂಧಿಸಿದ್ದಾರೆ.

    ಡೊಮಿನಿಕಾವು ಕೆರೆಬಿಯನ್​ ಸಮುದ್ರದ ಒಂದು ಸಣ್ಣ ದ್ವೀಪ ರಾಷ್ಟ್ರ. ಇಂಟರ್ಪೋಲ್ ನೀಡಿದ ಯೆಲ್ಲೋ ಕಾರ್ನರ್ ನೋಟಿಸ್​ ಬಳಿಕ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಪತ್ತೆಯಾಗಿದ್ದು, ಸದ್ಯ ಬಂಧನದಲ್ಲಿರುವ ಆತನನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಆಂಟಿಗುವಾ ಪೊಲೀಸರು ಡೊಮಿನಿಕಾ ಪೊಲೀಸರನ್ನು ಸಂಪರ್ಕಿಸಿದ್ದಾರೆ.

    ಮೆಹುಲ್​ ಚೋಕ್ಸಿ ಬಂಧನವಾಗಿರುವ ಬಗ್ಗೆ ಇಂಟರ್ಪೋಲ್​, ಸಿಬಿಐಗೆ ಮಾಹಿತಿ ನೀಡಿದ್ದು, ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡದಿಂದ ಬೋಟ್​ ಸಹಾಯದಿಂದ ಡೊಮಿನಿಕಾ ತಲುಪಿದ್ದಾನೆಂದು ತಿಳಿದುಬಂದಿದೆ.

    ಈ ಬಗ್ಗೆ ಮಾತನಾಡಿರುವ ಆಂಟಿಗುವಾ ಮತ್ತು ಬಾರ್ಬುಡ ಪ್ರಧಾನಿ ಗ್ಯಾಸ್ಟನ್​ ಬ್ರೋನ್​, ರಾಷ್ಟ್ರಕ್ಕೆ ಅಕ್ರಮವಾಗಿ ಪ್ರವೇಶ ನೀಡಿರುವ ಚೋಕ್ಸಿಯನ್ನು ಬಂಧಿಸುವಂತೆ ನಾವು ಡೊಮಿನಿಕನ್​ ಸರ್ಕಾರವನ್ನು ಕೇಳಿದ್ದೇವೆ. ಆತನನ್ನು ನೇರವಾಗಿ ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ.

    60 ವರ್ಷದ ಮೆಹುಲ್​ ಚೋಕ್ಸಿ 2017ರ ನವೆಂಬರ್​ನಲ್ಲಿ ಸಿಟಿಜನ್​ಷಿಪ್​ ಬೈ ಇನ್​ವೆಸ್ಟ್​ಮೆಂಟ್​ ಪ್ರೋಗ್ರಾಂ (ಸಿಐಪಿ) ಮೂಲಕ ಆಂಟಿಗುವಾ ಮತ್ತು ಬಾರ್ಬುಡಾ ದ್ವೀಪರಾಷ್ಟ್ರಗಳ ಪೌರತ್ವ ಪಡೆದಿದ್ದ. ಭಾರತದಿಂದ ಪರಾರಿಯಾದ ನಂತರ ಆತ ಆಂಟಿಗುವಾದಲ್ಲಿ ನೆಲೆಸಿದ್ದ. ತನ್ನ ಸಹೋದರ ನೀರವ್ ಮೋದಿ ಸಂಬಂಧಿ ಜತೆಗೂಡಿ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಿದ್ದು, ಇದರಲ್ಲಿ ಚೋಕ್ಸಿಯ ಪಾಲು 7 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿದೆ ಎನ್ನಲಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ಮೆಹುಲ್ ಚೋಕ್ಸಿ ವಿರುದ್ದ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿವೆ. ಈತನ ಬಂಧನಕ್ಕೆ ನೆರವಾಗಬೇಕೆಂದು ಸಿಬಿಐ ಹಾಗೂ ಇ.ಡಿ. ಮಾಡಿದ್ದ ಮನವಿ ಪುರಸ್ಕರಿಸಿರುವ ಇಂಟರ್​ಪೋಲ್, ಆರೋಪಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. (ಏಜೆನ್ಸೀಸ್​)

    ಹಳ್ಳಿಗಳ ಕಡೆಗೆ ಸಚಿವರ ನಡಿಗೆ: ಬಿಜೆಪಿ ಆಡಳಿತ ರಾಜ್ಯಗಳ ಸಚಿವರಿಗೆ ಸೂಚನೆ, ನಮೋ ಸರ್ಕಾರಕ್ಕೆ ಏಳು ವರ್ಷ

    ನಿರೀಕ್ಷೆಗಳನ್ನು ಸಾಧಿಸುವುದೇ ಮೋದಿ ಸರ್ಕಾರದ ಗುರುತು; ಮೋದಿ ಆಡಳಿತಕ್ಕೆ ಏಳು ವರ್ಷ

    ಬಿಎಸ್​ವೈ ಸ್ಥಾನಕ್ಕೆ ಸಿಗದ ಪರ್ಯಾಯ ನಾಯಕ; ಅಧಿಕಾರ ಕಳೆದುಕೊಳ್ಳಲು ಬಯಸದ ಹೈಕಮಾಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts