ವಂಚಕ ಕಂಪನಿಗಳಿಂದ ನ್ಯಾಯ ದೊರಕಿಸಲು ಆಗ್ರಹ; ತಿಂಗಳು ಪೂರೈಸಿದ ವಂಚನೆ ಸಂತ್ರಸ್ತೆ ಠೇವಣಿದಾರರ ಕುಟುಂಬದವರ ಸಂಸ್ಥೆ ಅನಿರ್ದಿಷ್ಠಾವಧಿ ಧರಣಿ

blank

ಹಾವೇರಿ: ಕಡಿಮೆ ಅವಧಿಯಲ್ಲಿ ಹಣ ಡಬಲ್ ಮಾಡುತ್ತೇವೆ, ಕಡಿಮೆ ಅವಧಿಯಲ್ಲಿ ಹಣ ದುಡಿಸಿ ದುಪ್ಪಟ್ಟು ಮಾಡುತ್ತೇವೆ ಎಂದೆಲ್ಲ ನಂಬಿಸಿ ಸಾವಿರಾರು ಜನರಿಂದ ಕೋಟ್ಯಂತರ ರೂ. ಪಾವತಿಸಿಕೊಂಡು ವಂಚಿಸಿರುವ ವಿವಿಧ ಕಂಪನಿಗಳಿಂದ ನ್ಯಾಯ ಕೊಡಿಸುವಂತೆ ಆಗ್ರಹಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದವರ ಸಂಸ್ಥೆ (ತಗಿ ಪೀಡಿತ ಜಮಾಕರ್ತ ಪರಿವಾರ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಒಂದು ತಿಂಗಳು ಪೂರೈಸಿದೆ.
ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಬಳಿ ಸೆ.2ರಿಂದ ಧರಣಿ ಆರಂಭಿಸಿದ್ದು, ಕಳೆದ ಒಂದು ತಿಂಗಳಿನಿಂದ ಧರಣಿ ನಡೆಸುತ್ತಿದ್ದರೂ ನಮ್ಮ ಬೇಡಿಕೆಗಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ಇವರೆಗೂ ಸ್ಪಂದಿಸುತ್ತಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿರುವ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ.
300ಕ್ಕೂ ಹೆಚ್ಚು ಕಂಪನಿಗಳು ಜಿಲ್ಲೆ ಸೇರಿದಂತೆ ದೇಶಾದ್ಯಂತ ಒಂದು ಸಲ ಹಣ ಠೇವಣಿ ಇಟ್ಟರೆ ಐದು, ಆರು ವರ್ಷಗಳಲ್ಲಿ ದುಪ್ಪಟ್ಟು ಮಾಡಿಕೊಡುತ್ತೇವೆ. ಷೇರು ಹಣ ಪಾವತಿಸಿದರೆ, ಹತ್ತಾರು ಪಟ್ಟು ಲಾಭ ದೊರೆಯುತ್ತದೆ ಎಂದೆಲ್ಲ ನಂಬಿಸಿ ಕೋಟ್ಯಂತರ ರೂ., ಪಾವತಿಸಿಕೊಂಡು ಕಚೇರಿಗಳನ್ನು ಬಂದ್ ಮಾಡಿಕೊಂಡು ಪರಾರಿಯಾಗಿವೆ. ಹಣದ ಆಸೆ ತೋರಿಸಿ ಮುಗ್ದ ಜನರಿಗೆ ಹಾವೇರಿ ಜಿಲ್ಲೆಯೊಂದರಲ್ಲೇ ಒಂದು ಕಂಪನಿ 40 ಕೋಟಿ ರೂ., ವಂಚಿಸಿದೆ. ಇಂತಹ ಅನೇಕ ಸಂಸ್ಥೆಗಳು ವಂಚನೆ ಮಾಡಿವೆ. ವಂಚನೆಗೀಡಾದವರಿಗೆ ಬಡ್ಸ್ ಕಾಯ್ದೆಯಡಿ ಅರ್ಜಿ ಸ್ವೀಕರಿಸಿ, ಎಲ್ಲ ಅರ್ಜಿದಾರರಿಗೆ ಹಣ ಕೊಡಿಸಬೇಕೆಂದು ಒತ್ತಾಯಿಸಿದರು.
ಈ ಕೂಡಲೇ ರಾಜ್ಯದಲ್ಲಿ ಪಾವತಿ ಶಿಬಿರಗಳನ್ನು ಆಯೋಜಿಸುವ ಮೂಲಕ ವಂಚನೆಗೊಳಗಾದ ಸಂತ್ರಸ್ತರ ಠೇವಣಿಗಳನ್ನು ತಕ್ಷಣವೇ ಪಾವತಿಸುವಂತೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪಾವತಿ ಖಾತರಿ ಹಕ್ಕುಗಳ ಕಾನೂನು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ(ಬಡ್ಸ್) 2019 ಅಡಿಯಲ್ಲಿ ಪ್ರತಿಯೊಬ್ಬ ವಂಚನೆಗೊಳಗಾದ ಹೂಡಿಕೆದಾರರ ಠೇವಣಿಯ ಎರಡರಿಂದ ಮೂರು ಪಟ್ಟು ತಕ್ಷಣವೇ ಪಾವತಿಸಬೇಕು. ನಿರುದ್ಯೋಗಿ ಮುಗ್ದ ಏಜೆಂಟರಿಗೆ ಭದ್ರತೆ, ಗೌರವ, ಉದ್ಯೋಗ ಮತ್ತು ಪುನರ್ವಸತಿ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಂಚನೆಗೆ ಒಳಗಾದ ಸಂಸ್ಥೆಯ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಬುಗಡೆ, ಜಿಲ್ಲಾಧ್ಯಕ್ಷ ಸೋಮಶೇಖರರಡ್ಡಿ ಮೈದೂರ, ತಾಲೂಕಾಧ್ಯಕ್ಷ ವೈ.ಎಸ್.ಬಡ್ನಿ, ಸೈಯದ್ ಸಾಬ ಹುಲಗೂರ, ಎಸ್.ಬಿ.ವನಹಳ್ಳಿ, ಎಸ್.ಬಿ.ಜಾಡರ್, ವಿರುಪಾಕ್ಷ ಡವಗಿ, ರಮೇಶ ಹರಿಜನ, ಸೇರಿ 300ಕ್ಕೂ ಅಧಿಕ ಸಂತ್ರಸ್ತರು ಪಾಲ್ಗೊಂಡಿದ್ದರು.

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…