ಮೆಡಿಕಲ್ ಕಾಲೇಜ್ ಬಳಿ ಅಂದರ್ ಬಾಹರ್ ಜೂಜಾಟ; 10 ಜನರನ್ನು ಬಂಧಿಸಿದ ಪೊಲೀಸರು

Published on

ಹಾವೇರಿ: ತಾಲೂಕಿನ ದೇವಗಿರಿ ಯಲ್ಲಾಪುರ ಬಳಿಯ ಮೆಡಿಕಲ್ ಕಾಲೇಜು ಹಿಂಬದಿಯಲ್ಲಿ ಗುರುವಾರ ರಾತ್ರಿ ಇಸ್ಪೀಟ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ಜಿಲ್ಲಾ ಅಪರಾಧ ದಾಖಲಾತಿ ವಿಭಾಗದ ಪೊಲೀಸರು ದಾಳಿ ನಡೆಸಿ ಹತ್ತು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 38,500 ರೂ. ನಗದು, 8 ಬೈಕ್, 11 ಮೊಬೈಲ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದೇವಗಿರಿ ಯಲ್ಲಾಪುರ ಹಾಗೂ ನಾಗೇಂದ್ರನಮಟ್ಟಿ ನಿವಾಸಿಗಳಾದ ಗುಡ್ಡಪ್ಪ ಲಮಾಣಿ, ಪರಶುರಾಮ ದೊಡ್ಡಮನಿ, ಪಕ್ಕೀರಪ್ಪ ಲಮಾಣಿ, ಹುಸೇನಸಾಬ ಆಡೂರ, ಸುರೇಶ ಹಿರೇಹಳ್ಳಿ, ಪ್ರಭು ಪೂಜಾರ, ತಬರೇಜ್ ಕರ್ಜಗಿ, ಶರಣಪ್ಪ ಕಟ್ಟಿಮನಿ, ನಿಂಗಪ್ಪ ಕನವಳ್ಳಿ, ಆನಂದ ಕಬ್ಬೂರ ಬಂದಿತ ಆರೋಪಿಗಳು.
ಆರೋಪಿತರು ಗುಂಪು ಕಟ್ಟಿಕೊಂಡು ಹಣ ಕಟ್ಟಿ ಅಂದರ್- ಬಾಹರ್ ಜೂಜಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡದುಕೊಂಡ ಪೊಲೀಸರು ಎಸ್‌ಪಿ ಅಂಶುಕುಮಾರ ಹಾಗೂ ಎಎಸ್‌ಪಿ ಸಿ.ಗೋಪಾಲ ಅವರ ಮಾರ್ಗದರ್ಶನದಲ್ಲಿ ಡಿಸಿಆರ್‌ಬಿ ಪಿಎಸ್‌ಐ ಸುಜಾತಾ ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿದೆ. ಡಿಸಿಆರ್‌ಬಿ ಸಿಬ್ಬಂದಿ ಪ್ರಕಾಶ ದೇವಗಿರಿ, ಗೋವಿಂದರಾಜ ಕಾಳೆ, ಹರೀಶ ಹಾಲಬಾವಿ, ಬೀರಪ್ಪ ಲಮಾಣಿ, ದಿಳ್ಳೆಪ್ಪ ಬಿಲ್ಲರ, ಮಾರುತಿ ಹಾಲಬಾವಿ, ಮಂಜುನಾಥ ಲಂಗೋಟಿ, ಶಶಿಕುಮಾರ ಕಾಕೋಳ, ವಸಂತ ಉಪಳೆ, ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net