ಹಾವೇರಿ: ರಾಣೆಬೆನ್ನೂರ ನಗರದಲ್ಲಿ ಆಯೋಜಿಸಿರುವ ಕರ್ನಾಟಕ ವೈಭವ ಕಾರ್ಯಕ್ರಮದ ಉದ್ಘಾಟನೆಗೆ ಫೆ.7ರಂದು ನಗರಕ್ಕೆ ಆಗಮಿಸುತ್ತಿರುವ ಉಪರಾಷ್ಟ್ರಪತಿ ಜಗದೀಪ ಧನಕರ ಅವರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕಾರ್ಯಕ್ರಮ ನಡೆಯುವ ಪ್ರದೇಶವನ್ನು ರೆಡ್ ಜೋನ್ ಹಾಗೂ ನೋ ಡ್ರೋನ್ ಫ್ಲೈ ಏರಿಯಾ ಎಂದು ಘೋಷಿಸಲಾಗಿದೆ.
ಡ್ರೋನ್ ಕಾಯ್ದೆ 2021ರ ನಿಯಮ 22 ಅನ್ವಯ ಫೆ.6ರ ಬೆಳಗ್ಗೆ 6ರಿಂದ ಫೆ.8ರ ಬೆಳಗ್ಗೆ 6 ಗಂಟೆವರೆಗೆ ರಾಣೆಬೆನ್ನೂರ ಗ್ರಾಮೀಣ ವ್ಯಾಪ್ತಿಯ ಹೆಲಿಪ್ಯಾಡ್ ಹಾಗೂ ರಾಣೆಬೆನ್ನೂರ ಶಹರ ಠಾಣೆಯ ಕಾರ್ಯಕ್ರಮದ ಸ್ಥಳವಾದ ರಾಜ ರಾಜೇಶ್ವರಿ ಮಹಾವಿದ್ಯಾಲಯ, ಬಸ್ ನಿಲ್ದಾಣದ ಎದುರು ಹಾಗೂ ಸುತ್ತಮುತ್ತಲಿನ 2 ಕಿಮೀ ಪ್ರದೇಶವನ್ನು ರೆಡ್ ಝೋನ್ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.