ಹಾವೇರಿ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಾಗೂ ಗುಣಾತ್ಮಕ ಕಲಿಕೆಗಾಗಿ ಜಿಲ್ಲೆಯ ಶಿಕ್ಷಕರು ಬದ್ಧತೆಯಿಂದ ಶ್ರಮಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್ ಹುಗ್ಗಿ ಕರೆ ನೀಡಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಕರ ಸ್ನೇಹಿಯಾಗಿ ಅಧಿಕಾರಿಗಳು, ಮಕ್ಕಳ ಸ್ನೇಹಿಯಾಗಿ ಶಿಕ್ಷಕರು ಕೆಲಸ ಮಾಡಬೇಕು. ಎಲ್ಲ ಶಿಕ್ಷಕರಿಗೂ ಅನುಕೂಲವಾಗುವ ರೀತಿಯಲ್ಲಿ ಇಲಾಖೆ ಮತ್ತು ಸಂಘ ಅನುಕೂಲತೆಗಳನ್ನು ಮಾಡಿಕೊಡುತ್ತದೆ. ನೀವು ಜಿಲ್ಲೆಯಲ್ಲಿ ಶಿಕ್ಷಣದ ಗುಣಾತ್ಮಕತೆ ಹೆಚ್ಚಿಸಲು ಕೈಜೋಡಿಸಿ ಎಂದು ಕರೆ ನೀಡಿದರು.
ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ ಶಿಡೇನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ 8 ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್ ಪಾಟೀಲ, ಎಸ್.ಎಸ್ ಅಡಿಗ, ಎಸ್.ಜಿ ಕೋಟಿ, ಎನ್.ಶ್ರೀಧರ, ವಿ.ವಿ ಸಾಲಿಮಠ, ಎಂ.ಬಿ ಅಂಬಿಗೇರ, ಎಂ.ಎಫ್ ಬಾರ್ಕಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ, ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಅನುರಾಧಾ ಎ., ಎಂ.ಎಸ್ ಬಡಿಗೇರ, ಎ.ಐ ಶೇತಸನದಿ, ಆರ್.ವೈ ಗೋಣೆಪ್ಪನವರ, ಇ.ಸಿ ಅಗಸಿಬಾಗಿಲ, ಅಶೋಕ ಹಾಡೋರಿ, ಜಿಲ್ಲೆಯ ಎಂಟು ತಾಲೂಕಿನ ಪದಾಧಿಕಾರಿಗಳಾದ ಸಿ.ಜಿ ಪಾಟೀಲ, ಮಖ್ಬೂಲ್ ಲಿಂಗದಹಳ್ಳಿ, ಬಿ.ಎಸ್ ಅರಳಿ, ರಮೇಶ ಪೂಜಾರ, ಜಗದೀಶ ಜೋಗಿಹಳ್ಳಿ, ಸರಸ್ವತಿ ಅಜ್ಜಪ್ಪಗೌಡ್ರ, ಸುಧಾ ಪಾಟೀಲ, ಎನ್.ಎಂ ಕರಿಗಾರ, ಚಂದ್ರಣ್ಣ ಸಣ್ಣಗೌಡ್ರ, ಎಸ್.ಟಿ ಕೋಟಿಹಾಳ, ಎಚ್.ಎಂ ಸುತಾರ, ಎಫ್.ಸಿ ಕಾಡಪ್ಪಗೌಡ್ರು, ಶಿವು ಆಲದಕಟ್ಟಿ, ಇತರರು ಉಪಸ್ಥಿತರಿದ್ದರು
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಚಲ್ಲಾಳ ನಿರೂಪಿಸಿದರು.