ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ನಟಿ ತ್ರಿಷಾ ಹೇಗಿದ್ದರು ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋ

Trisha
Published on

ಚೆನ್ನೈ: ಬಹುಭಾಷಾ ನಟಿ ತ್ರಿಷಾ (Trisha) ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ.

ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಕೊನೆಯದಾಗಿ ಬಿಡುಗಡೆಯಾದ ಅವರ ನಟನೆಯ ಪೊನ್ನಿಯನ್​ ಸೆಲ್ವನ್​ ಮತ್ತು ಲಿಯೋ ಸಿನಿಮಾ ಉತ್ತಮ ಯಶಸ್ಸು ಗಳಿಸಿತು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಗೋಟ್​ ಸಿನಿಮಾದ ಹಾಡೊಂದರಲ್ಲಿ ಅತಿಥಿ ಪಾತ್ರದಲ್ಲಿ ಸೊಂಟ ಬಳುಕಿಸಿದರು.

ಸದ್ಯ ತ್ರಿಷಾ ಅವರ ವಯಸ್ಸು 40. ಆದರೂ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ. ಅಲ್ಲದೆ, ಇಂದಿಗೂ ಅದೇ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹೀಗಾಗಿಯೇ ತ್ರಿಷಾ ಅಂದರೆ ಇಂದಿಗೂ ಸಿನಿರಸಿಕರ ಹಾಟ್​ ಫೇವರಿಟ್​.

ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿರುವ ತ್ರಿಷಾ, ಇಂದಿಗೂ ಸ್ಟಾರ್​ ನಾಯಕಿಯ ಪಟ್ಟವನ್ನು ಕಾಯ್ದುಕೊಂಡಿದ್ದಾರೆ. ಚಿತ್ರರಂಗದಲ್ಲಿ ನಾಯಕಿಯರ ಕ್ರೇಜ್​ ಕೆಲವೇ ದಿನಗಳಿಗೆ ಸೀಮಿತ ಎಂಬುದನ್ನು ತ್ರಿಷಾ ಸುಳ್ಳು ಮಾಡಿದ್ದಾರೆ. ನಾಯಕಿಯಾಗಿ ತಮ್ಮದೇ ಸ್ಥಾನವನ್ನು ಕಾಯ್ದುಕೊಂಡು ಬಂದಿರುವ ತ್ರಿಷಾ ಚಿತ್ರರಂಗಕ್ಕೆ ಬರುವ ಮೊದಲು ಹೇಗಿದ್ದರು ಎಂಬುದನ್ನು ಬಹುತೇಕರು ನೋಡಿಲ್ಲ. ಹೇಗಿದ್ದರು ಎಂಬುದನ್ನು ನೋಡುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಆ ಕುತೂಹಲ ತಣಿಸುವ ಫೋಟೋ ಇಲ್ಲಿದೆ. ಹೌದು, ತ್ರಿಷಾ (Trisha Rare Photo) ಅವರು ಸಿನಿಮಾ ಪ್ರವೇಶಿಸುವ ಮುನ್ನ ತೆಗೆದ ಅಪರೂಪದ ಫೋಟೋ ಇಲ್ಲಿದೆ ನೋಡಿ.

Trisha Rare Photo

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ತ್ರಿಷಾ ಅವರು ಮೆಗಾಸ್ಟಾರ್​ ಚಿರಂಜೀವಿ ನಟನೆಯ ವಿಶ್ವಂಭರಂ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ತಮಿಳು ಸಿನಿಮಾಗಳಾದ ವಿಡ ಮುಯರ್ಚಿ, ಥಗ್​ ಲೈಫ್​ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಮೋಹನ್​ಲಾಲ್​ ನಟನೆಯ ರಾಮ್​ ಹೆಸರಿನ ಮಲಯಾಳಂ ಸಿನಿಮಾಗೂ ತ್ರಿಷಾ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)

Trisha Rare Photo
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net