

ನವದೆಹಲಿ: ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್ನ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು. ಮೈದಾನಕ್ಕೆ ಇಳಿದು ಚೆಂಡನ್ನು ಹಿಡಿದರೆ ಸಾಕು ಕ್ರೀಸ್ನಲ್ಲಿರುವ ಬ್ಯಾಟರ್ಗಳು ಒಂದು ಕ್ಷಣ ಚಿಂತೆಗೆ ಜಾರುತ್ತಾರೆ. ಇದೊಂದು ಓವರ್ ತಪ್ಪಿಸಿಕೊಂಡರೆ ಸಾಕು ಎಂದು ಬೇಡಿಕೊಳ್ಳುತ್ತಾರೆ. ಏಕೆಂದರೆ, ಬುಮ್ರಾ ಎಸೆಯುವ ಚೆಂಡು ಅಷ್ಟು ಪರಿಣಾಮಕಾರಿಯಾಗಿರುತ್ತದೆ.
ಡೆತ್ ಓವರ್ ಸ್ಪೆಷಲಿಸ್ಟ್, ಯಾರ್ಕರ್ಗಳ ರಾಜನೆಂದೇ ಖ್ಯಾತಿಯಾಗಿರುವ ಬುಮ್ರಾ, ಹಲವು ಸಂದರ್ಭಗಳಲ್ಲಿ ಯಾರ್ಕರ್ ಮೂಲಕ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದ್ದಾರೆ. ಇನ್ನು ಬುಮ್ರಾ ಅವರ ಬೌಲಿಂಗ್ ಶೈಲಿಯೇ ತುಂಬಾ ವಿಭಿನ್ನವಾಗಿರುವುದು ಮತ್ತೊಂದು ವಿಶೇಷ. ಕ್ರಿಕೆಟ್ನಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ ಬುಮ್ರಾ ಅವರ ಬೌಲಿಂಗ್ ಆಕ್ಷನ್ ಅನ್ನು ಕಾಪಿ ಮಾಡಲು ಪ್ರಯತ್ನಿಸುತ್ತಾರೆ. ಅದೇ ರೀತಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಬುಮ್ರಾ ಅವರ ಬೌಲಿಂಗ್ ಶೈಲಿಯನ್ನು ಅಚ್ಚುಕಟ್ಟಾಗಿ ಕಾಪಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಲೇಡಿ ಬುಮ್ರಾ ಎಂದು ಕಮೆಂಟ್ ಮಾಡುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲಾ ಸಮವಸ್ತ್ರದಲ್ಲಿ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಆಕೆಯ ಬೌಲಿಂಗ್ ಆಕ್ಷನ್ ನೋಡಿದರೆ, ಥಟ್ಟನೆ ಬುಮ್ರಾ ಅವರ ಬೌಲಿಂಗ್ ಆಕ್ಷನ್ ನೆನಪಾಗುತ್ತದೆ. ಮೈದಾನದಲ್ಲಿ ಬುಮ್ರಾ ಎಷ್ಟು ದೂರದಿಂದ ಓಡಿ ಬಂದು ಬೌಲಿಂಗ್ ಮಾಡುತ್ತಾರೋ ಅದೇ ರೀತಿ ವಿದ್ಯಾರ್ಥಿನಿ ಕೂಡ ಬೌಲಿಂಗ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಎಲ್ಲ ಮೂರು ಫಾರ್ಮೆಟ್ಗಳಲ್ಲಿ ಆಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 36 ಟೆಸ್ಟ್ಗಳು, 89 ಏಕದಿನ ಪಂದ್ಯಗಳು ಮತ್ತು 70 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 159, ಏಕದಿನದಲ್ಲಿ 149 ಮತ್ತು ಟಿ20ಯಲ್ಲಿ 89 ವಿಕೆಟ್ಗಳನ್ನು ಪಡೆದಿದ್ದಾರೆ. (ಏಜೆನ್ಸೀಸ್)