ಕಡಲಾಮೆ ಮೊಟ್ಟೆ ರಕ್ಷಣೆಗೆ ಹ್ಯಾಚರಿ

blank

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

blank

ಆಳ ಸಮುದ್ರದ ಅಪೂರ್ವ ಕಡಲಾಮೆ ಆಲಿವ್ ರಿಡ್ಲೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕಡಲ ತೀರದಲ್ಲಿ ಮೊಟ್ಟೆ ಇಡಲು ಪ್ರಾರಂಭಿಸಿದ್ದು, ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಕಡಲಾಮೆ ಮೊಟ್ಟೆಗಳ ರಕ್ಷಣೆಗಾಗಿ ಸಮುದ್ರ ತೀರದಲ್ಲಿ ಹ್ಯಾಚರಿ (ಕಡಲಾಮೆ ಮೊಟ್ಟೆಗಳ ಸುರಕ್ಷಿತ ಪ್ರದೇಶ) ನಿರ್ಮಿಸಿ ವಿನೂತನ ಪ್ರಯೋಗ ನಡೆಸಿದೆ.

ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ ಮಾರ್ಗದರ್ಶನದಲ್ಲಿ ಕುಂದಾಪುರ ವಲಯ ಅರಣ್ಯ ಇಲಾಖೆ 21 ಅಡಿ ಅಗಲ, 10 ಅಡಿ ಉದ್ದದ ಹ್ಯಾಚರಿ ನಿರ್ಮಿಸಿದೆ. ಅಳಿವಿನ ಅಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳು ಬೇರೆ ಬೇರೆ ಕಾರಣಕ್ಕೆ ಹಾನಿಗೊಳ್ಳದಂತೆ ನೋಡಿಕೊಳ್ಳಲು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸುವ ಮೂಲಕ ಸಂರಕ್ಷಿಸಲಾಗುತ್ತಿದೆ. ಸಮುದ್ರದಿಂದ ಹೊರಬಂದು ದಡದಲ್ಲಿ ಕಡಲಾಮೆಗಳು ಮೊಟ್ಟೆಯಿಟ್ಟ 48-60 ದಿನದಲ್ಲಿ ಮರಿಗಳು ಹೊರಬರುತ್ತವೆ. ಕಡಲತೀರಕ್ಕೆ ಬಂದು ಮೊಟ್ಟೆ ಇಟ್ಟು ಹೋಗುವ ಕಡಲಾಮೆ ಪ್ರಕ್ರಿಯೆ ಅವಲೋಕಿಸಲು ಸಿಬ್ಬಂದಿ ನಿಯೋಜಿಸಿದೆ. ಕಡಲಾಮೆ ಸಂರಕ್ಷಣೆಯಡಿ ಕೆಲಸ ನಿರ್ವಹಿಸುತ್ತಿರುವ ರೀಫ್‌ವಾಚ್ ಸಂಸ್ಥೆ ಮತ್ತು ಸ್ಥಳೀಯ ಮೀನುಗಾರರು ಹ್ಯಾಚರಿ ಸುರಕ್ಷತೆಗೆ ಸಹಕರಿಸುತ್ತಿದ್ದಾರೆ.

ಸಂತಾನೋತ್ಪತ್ತಿ ಕಾಲಘಟ್ಟದಲ್ಲಿ ತೀರಕ್ಕೆ ಬಂದು ಹೋಗುವ ಕಡಲಾಮೆಗಳ ಮೊಟ್ಟೆಗಳು ಬೀದಿನಾಯಿ ಪಾಲಾಗುವ ಸಾಧ್ಯತೆ ಇರುತ್ತದೆ. ಕಡಲಬ್ಬರ ಹೆಚ್ಚಿರುವಲ್ಲಿ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಮೀನುಗಾರರ ದೈನಂದಿನ ಕಾಯಕದ ನಡುವೆ ಅರಿವಿಲ್ಲದೆ ಮೊಟ್ಟೆಗಳಿಗೆ ಹಾನಿ ಆಗುವ ಸಂಭವವೂ ಇರುತ್ತದೆ. ಈ ಕಾರಣಕ್ಕೆ ಮೊಟ್ಟೆಗಳು ಹಾನಿಗೀಡಾಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಹ್ಯಾಚರಿ ನಿರ್ಮಿಸಿದೆ.

ಮುಂದಿನ ವಾರ ಮರಿಗಳ ನಿರೀಕ್ಷೆ

ಕುಂದಾಪುರ ತಾಲೂಕಿನ ಕೋಡಿ ಕಡಲ ತೀರದಲ್ಲಿ ಕಳೆದ ಸಾಲಿನಲ್ಲಿ ಸುಮಾರು 553 ಮರಿಗಳು ಮರಳಿ ಕಡಲು ಸೇರಿದ್ದರೆ, ಬೈಂದೂರಿ ತಾಲೂಕಿನ ಮರವಂತೆ ಹ್ಯಾಚರಿಯಲ್ಲಿ ಮೊಟ್ಟೆಗಳು ಒಡೆದು 115 ಮರಿಗಳು ಹೊರಬಂದು ಕಡಲು ಸೇರಿವೆ. ತಾರಾಪತಿಯಲ್ಲಿ ನಿರ್ಮಿಸಲಾಗಿರುವ ಪ್ರತ್ಯೇಕ 2 ಹ್ಯಾಚರಿಗಳಲ್ಲಿ ಮುಂದಿನ ವಾರದಲ್ಲಿ ಮರಿಗಳು ಬರುವ ನಿರೀಕ್ಷೆಯಿದೆ.

ಕಡಲಾಮೆಗಳ ಸ್ವರ್ಗ

2020ರ ಡಿಸೆಂಬರ್‌ನಿಂದ ನಿರಂತರ ಕೋಡಿಯಲ್ಲಿ ಕಡಲಾಮೆಗಳು ಮೊಟ್ಟೆ ಇರಿಸಲು ಆಗಮಿಸುತ್ತಿದ್ದು, ಕೋಡಿ ಬೀಚ್ ಕಡಲಾಮೆಗಳ ಸ್ವರ್ಗ ಎಂದು ಗುರುತಿಸಿಕೊಂಡಿದೆ. ಇನ್ನೊಂದೆಡೆ ಮರವಂತೆ, ತಾರಾಪತಿ ಹಾಗೂ ಪಡುವರಿ ಕಡಲ ತೀರದಲ್ಲೂ ಕಡಲಾಮೆಗಳು ಮೊಟ್ಟೆ ಇಡಲು ಬರುತ್ತಿದ್ದು, ಈ ಪ್ರದೇಶದಲ್ಲೂ ಕೂಡ ಹ್ಯಾಚರಿಗಳನ್ನು ನಿರ್ಮಿಸುವ ಮೂಲಕ ಮೊಟ್ಟೆಗಳ ಸಂರಕ್ಷಣೆಗೆ ಇಲಾಖೆ ಮುಂದಾಗಿದೆ.

ಕಡಲಾಮೆಗಳ ಮೊಟ್ಟೆಗಳಿಗೆ ಹಾನಿಗೀಡಾಗದಂತೆ ರಕ್ಷಿಸಲು ಬೀಚ್‌ನಲ್ಲಿ ಹ್ಯಾಚರಿ ನಿರ್ಮಿಸಲಾಗಿದೆ. ಸುರಕ್ಷಿತವಲ್ಲದ ಸ್ಥಳಗಳಲ್ಲಿ ಒಂದೊಮ್ಮೆ ಕಡಲಾಮೆ ಮೊಟ್ಟೆ ಇಟ್ಟು ಹೋದರೆ, ಅವುಗಳನ್ನು ಸಂಗ್ರಹಿಸಿ ಹ್ಯಾಚರಿಯಲ್ಲಿಟ್ಟು ರಕ್ಷಣೆ ಮಾಡಲಾಗುತ್ತದೆ. ಸುರಕ್ಷಿತ ಸ್ಥಳದಲಿಟ್ಟರೆ ಅಲ್ಲಿಯೇ ಗೂಡು ರಚಿಸಿ ಕಾವಲು ನಿಯೋಜಿಸಲಾಗುತ್ತದೆ. ಮೊದಲ ಬಾರಿಗೆ ಈ ವಿನೂತನ ಪ್ರಯೋಗ ಕೈಗೊಂಡಿದ್ದು, ಯಶಸ್ಸು ದೊರೆಯುತ್ತಿದೆ.
– ಸಂದೇಶ ಆರ್‌ಎಫ್‌ಒ ಬೈಂದೂರು

ಮೈಕ್ರೋ-ಫೈನಾನ್ಸ್​, ಲೇವಾದೇವಿ ಸಂಸ್ಥೆಗಳ ನೋಂದಣಿ ಕಡ್ಡಾಯ

ಅನಧಿಕೃತ ಹೋಂ ಸ್ಟೇಗಳ ನೋಂದಣಿಗೆ 1 ತಿಂಗಳ ಅಂತಿಮ ಗಡುವು

 

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank