More

    HastaRekha: ನಿಮ್ಮ ಅಂಗೈಯಲ್ಲಿ ಈ ಗುರುತು ಇದ್ದರೆ ಈ ವಯಸ್ಸಿನಲ್ಲಿ ಶ್ರೀಮಂತರಾಗುತ್ತೀರಿ..!

    ಬೆಂಗಳೂರು: ಪ್ರತಿಯೊಬ್ಬರ ಅಂಗೈಯಲ್ಲಿ ರೇಖೆಗಳಿರುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರವು ಈ ರೇಖೆಗಳ ಅರ್ಥವನ್ನು ಅಧ್ಯಯನ ಮಾಡುತ್ತದೆ. ಪ್ರತಿಯೊಂದು ರೇಖೆಗಳು ವ್ಯಕ್ತಿಯ ಜೀವನ ಮಾರ್ಗವನ್ನು ಹೇಳುತ್ತದೆ ಎಂದು ನಂಬಲಾಗಿದೆ. ಕೆಲವು ರೇಖೆಗಳು ವ್ಯಕ್ತಿತ್ವದ ಲಕ್ಷಣಗಳನ್ನು ಬಹಿರಂಗಪಡಿಸಿದರೆ, ಮತ್ತೆ ಕೆಲವು ರೇಖೆಗಳು ಯಶಸ್ಸು, ಪ್ರೀತಿ ಮತ್ತು ಸಂಬಂಧದ ಬಗ್ಗೆ ಮಾಹಿತಿ ತಿಳಿಸುತ್ತವೆ. ಅಂದಹಾಗೆ ನಿಮ್ಮ ಅಂಗೈಯಲ್ಲಿ ‘ವಿ’ ಆಕಾರದ ರೇಖೆಯಿದ್ದರೆ ನಿಮ್ಮ ಅದೃಷ್ಟವು ಖಂಡಿತವಾಗಿ ಒಂದು ದಿನ ಬದಲಾಗುತ್ತದೆ. ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ…

    ಈ ಭಾಗದಲ್ಲಿರುತ್ತದೆ ರೇಖೆ
    ಎಡಗೈಯಲ್ಲಿರುವ ರೇಖೆಗಳು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತವೆ. ಆದರೆ ಬಲಗೈಯಲ್ಲಿರುವ ರೇಖೆಗಳು ನೀವು ಸಾಗುತ್ತಿರುವ ಹಾದಿಯ ಭವಿಷ್ಯವನ್ನು ತಿಳಿಸುತ್ತವೆ. ನಿಮ್ಮ ಬಲಗೈಯಲ್ಲಿ ‘ವಿ’ ಅಕ್ಷರವನ್ನು ನೀವು ಹುಡುಕುತ್ತಿದ್ದರೆ, ನಿಮ್ಮ ತೋರು ಬೆರಳಿನ ಕೆಳಗೆ, ಮೇಲಿನ ಪ್ರಮುಖ ಹಾರ್ಟ್ ಲೈನ್​​​​ನಲ್ಲಿ ನೀವು ಅದನ್ನು ಕಂಡುಹಿಡಿಯಬೇಕು. “ವಿ” ಅಕ್ಷರವನ್ನು ಹೊಂದಿರುವ ಪುರುಷರು ಮತ್ತು ಮಹಿಳೆಯರು ಜೀವನದಲ್ಲಿ ತುಂಬಾ ಅದೃಷ್ಟವಂತರು ಮತ್ತು ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಈ ರೇಖೆಯ ಉಪಸ್ಥಿತಿಯು ನೀವು ಪ್ರಗತಿಯತ್ತಾ ಸಾಗುತ್ತಿರುವಿರಿ ಎಂದು ಹೇಳಲಾಗುತ್ತದೆ.

    ಹಸ್ತಸಾಮುದ್ರಿಕರ ಪ್ರಕಾರ, ತೋರುಬೆರಳು ಮತ್ತು ಮಧ್ಯದ ಬೆರಳಿನ ನಡುವೆ ‘ವಿ’ ಗುರುತು ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತಮ್ಮ ಅಂಗೈಯಲ್ಲಿ ‘ವಿ’ ಗುರುತು ಹೊಂದಿರುವ ಜನರು ಸಕಾರಾತ್ಮಕ ಚಿಂತನೆಯಿಂದ ತುಂಬಿರುತ್ತಾರೆ. ಅಂತಹ ಜನರು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಸಹ ಪ್ಯಾನಿಕ್ ಆಗುವುದಿಲ್ಲ. ಕೈಯಲ್ಲಿ ಈ ಗುರುತು ಇರುವವರ ಅದೃಷ್ಟವು 35 ವರ್ಷದ ನಂತರ ಬದಲಾಗಲು ಪ್ರಾರಂಭಿಸುತ್ತದೆ. ಅವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. 40 ವರ್ಷ ವಯಸ್ಸಿನ ನಂತರ, ಈ ಜನರ ಜೀವನದಲ್ಲಿ ಎಂದಿಗೂ ಹಣದ ಕೊರತೆಯಿರುವುದಿಲ್ಲ.

    ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ತಮ್ಮ ಅಂಗೈಯಲ್ಲಿ ವಿ ಗುರುತು ಹೊಂದಿರುವ ಜನರು ಹೃದಯದಲ್ಲಿ ಕರುಣಾಮಯಿಗಳಾಗಿರುತ್ತಾರೆ. ಅವರು ಇತರರಿಗೆ ಸಹಾಯ ಮಾಡುತ್ತಾರೆ ಮತ್ತು ಅಂತಹ ಜನರನ್ನು ಬ್ಲೈಂಡ್ ಆಗಿ ನಂಬಬಹುದು. 

    ಮಹಾಶಿವರಾತ್ರಿಯಂದು ಈ 7 ಕೆಲಸಗಳನ್ನು ಮಾಡಬೇಡಿ, ಇಲ್ಲವಾದಲ್ಲಿ ಅಪಾರ ನಷ್ಟ ಅನುಭವಿಸುವಿರಿ

    ಡ್ರಗ್ಸ್ ದಂಧೆ: ಖ್ಯಾತ ನಿರ್ಮಾಪಕ, ಮಾಜಿ ಡಿಎಂಕೆ ನಾಯಕ ಅರೆಸ್ಟ್; 2,000 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts