ಕುಂಬಾರನಹಳ್ಳಿಯಲ್ಲಿ ಸುಗ್ಗಿಹಬ್ಬ ಸಂಭ್ರಮ

111
ಆನೇಕಲ್​ ತಾಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರನಹಳ್ಳಿಯಲ್ಲಿ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್​ ಸಂದ ವತಿಯಿಂದ ಹಮ್ಮಿಕೊಂಡಿದ್ದ ಸುಗ್ಗಿ ಹಬ್ಬದಲ್ಲಿ ಮಹಿಳೆಯರು ರಾಶಿ ಪೂಜೆಯಲ್ಲಿ ತೊಡಗಿರುವುದು.
Published on

ಆನೇಕಲ್​: ತಾಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರನಹಳ್ಳಿಯಲ್ಲಿ ಸೋಮವಾರ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್​ ಸಂದ ವತಿಯಿಂದ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯಿತು. ತಾಲ್ಲೂಕಿನ ವಿವಿಧ ಭಾಗದ ರೈತರು ಸುಗ್ಗಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಗೋಪೂಜೆ, ರಾಶಿ ಪೂಜೆ, ಕೋಲಾಟ, ಭಜನೆ, ಗ್ರಾಮೀಣ ಕ್ರೀಡೆಗಳು, ರಂಗೋಲಿ ಸ್ಪರ್ಧೆ ಮತ್ತು ಎತ್ತುಗಳ ಮೆರವಣಿಗೆ ನಡೆಸಲಾಯಿತು. ಸುಗ್ಗಿ ಹಬ್ಬದಲ್ಲಿ ರೈತ ಮಹಿಳೆಯರು ರಂಗೋಲಿ ಮತ್ತು ಕೋಲಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಭಾರತೀಯ ಕಿಸಾನ್​ ಸಂದ ದಣ ಪ್ರಾಂತ್ಯ ಸಂಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ಹಬ್ಬಗಳ ಆಚರಣೆಯು ಮುಂದಿನ ಪೀಳಿಗೆಗೆ ಸಂಸತಿ ಮತ್ತು ಆಚರಣೆಯ ಮಹತ್ವವನ್ನು ತಿಳಿಸುತ್ತದೆ. ನಗರೀಕರಣ ಪ್ರಭಾವದಿಂದಾಗಿ ಹಬ್ಬಗಳ ಆಚರಣೆಯು ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.

ಸಂದ ತಾಲೂಕು ಅಧ್ಯ ಮಂಜುನಾಥ್​ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಭೂಮಿ ತಾಯಿ ಆಶೀರ್ವಾದದಿಂದ ಮಾನವ ಸಂಕುಲಕ್ಕೆ ಅನ್ನ ನೀಡುವ ಶಕ್ತಿಯನ್ನು ಪಡೆದಿದ್ದಾರೆ. ಹಾಗಾಗಿ ಭೂಮಿ ತಾಯಿಗೆ ನಮನ ಸಲ್ಲಿಸಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ. ಸಂಪನ್ನ ಗ್ರಾಮ, ಸ್ವಾವಲಂಬಿ ರೈತ ಮತ್ತು ಸಮರ್ಥ ಭಾರತ ಘೋಷಣೆಯಡಿಯಲ್ಲಿ ಸುಗ್ಗಿ ಹಬ್ಬವನ್ನು ರೂಪಿಸಲಾಗಿದೆ ಎಂದರು.

ಭಾರತೀಯ ಕಿಸಾನ್​ ಸಂದ ರಾಜ್ಯ ಖಜಾಂಚಿ ಜವರಾಯಿಗೌಡ, ತಾಲೂಕು ಕಾರ್ಯದರ್ಶಿ ಕೆ.ಎನ್​.ಮಂಜುನಾಥ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್​ ರೆಡ್ಡಿ, ಪದಾಧಿಕಾರಿಗಳಾದ ಪುಟ್ಟಮ್ಮ, ಅಮೃತಮ್ಮ ಸುಬ್ರಮಣಿ, ಅಶ್ವಿನ್​, ಸ್ವರೂಪ್​, ಶಿವಕುಮಾರ್​, ಅಶೋಕ್​, ಮಂಜುನಾಥರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಬಾಬು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net