More

    ಹೃದಯಾಘಾತ ತಡೆಗಟ್ಟಲು ಇಂತಹ ಆಹಾರ ಸೇವಿಸುವುದು ಒಳ್ಳೆಯದು: ಹಾರ್ವರ್ಡ್ ಅಧ್ಯಯನ

    ಬೆಂಗಳೂರು: ಯುವಕರನ್ನೂ ಹೃದಯಾಘಾತ ಕಾಡುತ್ತಿದೆ. ಹೃದಯಾಘಾತದಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಪದ್ಧತಿ ಮತ್ತು ಒತ್ತಡವು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚು ಮಾಡಿದೆ. ಆಧುನಿಕ ಜೀವನಶೈಲಿಯು ದೇಹದಲ್ಲಿ ಟ್ರೈಗ್ಲಿಸರೈಡ್‌ಗಳ ಶೇಖರಣೆಗೆ ಆಸ್ಪದ ನೀಡುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಹೃದಯಕ್ಕೆ ಹಾನಿಕಾರಕವಾಗಿದೆ. ಆದರೆ ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾಯಿಸುವ ಮೂಲಕ ಹೃದಯದ ಆರೋಗ್ಯ ರಕ್ಷಿಸಬಹುದು ಎಂದು ಹಾರ್ವರ್ಡ್ ಅಧ್ಯಯನವೊಂದು ಹೇಳಿದೆ.

    ಹೃದಯಾಘಾತಕ್ಕೆ ಮುಖ್ಯ ಕಾರಣಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಶೇಖರಣೆ. ಈ ಎರಡನ್ನು ದೇಹದಲ್ಲಿ ಶೇಖರಣೆಯಾಗದಂತೆ ತಡೆಯುವುದರಿಂದ ಹೃದಯದ ಆರೋಗ್ಯ ರಕ್ಷಿಸಬಹುದು. ನಮ್ಮ ದೇಹವು ಅಗತ್ಯವಾದ ಕೊಲೆಸ್ಟ್ರಾಲ್ ಉತ್ಪಾದಿಸುತ್ತದೆ. ಹಾಗೆಯೇ ನಾವು ಸೇವಿಸುವ ಆಹಾರದ ಮೂಲಕವೂ ದೇಹದಲ್ಲಿ ಕೊಲೆಸ್ಟ್ರಾಲ್ ನಷ್ಟವಾಗುತ್ತದೆ. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ. ಒಳ್ಳೆಯ ಕೊಲೆಸ್ಟ್ರಾಲ್ ಹೃದಯಕ್ಕೆ ಒಳ್ಳೆಯದು. ನಾವು ಸೇವಿಸುವ ಆಹಾರದ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಪ್ಪಿಸಬೇಕು.

    ಹಾರ್ವರ್ಡ್ ವಿಶ್ವವಿದ್ಯಾಲಯದ ವೈದ್ಯರು ಯಾವ ರೀತಿಯ ಆಹಾರ ಸೇವಿಸಬೇಕೆಂದು ತಿಳಿಸಿದ್ದು, ಅವುಗಳನ್ನು ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. 

    ಓಟ್ಸ್​​​​​ನಿಂದ ಮಾಡಿದ ಆಹಾರ
    ದೈನಂದಿನ ಆಹಾರದಲ್ಲಿ ಓಟ್ಸ್ ಇರಲಿ. ಏಕೆಂದರೆ ಇದು ಬೀಟಾ ಗ್ಲುಕನ್ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಎಲ್ಲಾ ಆಹಾರವು ಜೀರ್ಣವಾಗುತ್ತದೆ. ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ಕೂಡ ತಡೆಯುತ್ತದೆ. ಆದ್ದರಿಂದ ಪ್ರತಿದಿನ ಓಟ್ಸ್ ನಿಂದ ಮಾಡಿದ ಆಹಾರಗಳನ್ನು ಸೇವಿಸಲು ಪ್ರಯತ್ನಿಸಿ.

    ಎಲ್ಲಾ ರೀತಿಯ ಬೀನ್ಸ್ ಹೃದಯಕ್ಕೆ ಒಳ್ಳೆಯದು
    ಬೀನ್ಸ್‌ನಲ್ಲಿ ಹಲವು ವಿಧಗಳಿವೆ. ಆ ಎಲ್ಲಾ ರೀತಿಯ ಬೀನ್ಸ್ ಕೂಡ ಹೃದಯಕ್ಕೆ ಒಳ್ಳೆಯದು. ರಾಜ್ಮಾ ಕೂಡ ಬೀನ್ಸ್ ಜಾತಿಗೆ ಸೇರಿದೆ. ಇದರಿಂದ ಬೇಯಿಸಿದ ತಿನಿಸುಗಳನ್ನು ತಿನ್ನುವುದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದು ಫೈಬರ್​​​ನಲ್ಲಿಯೂ ಸಮೃದ್ಧವಾಗಿದೆ. ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗುವುದಿಲ್ಲ.

    ಬದನೆಕಾಯಿ, ಬೆಂಡೆಕಾಯಿ
    ಬದನೆಕಾಯಿ ಮತ್ತು ಬೆಂಡೆಕಾಯಿಯನ್ನು ಸಹ ಹೆಚ್ಚು ತಿನ್ನಬೇಕು. ಆದರೆ ಹೆಚ್ಚಿನ ಜನರು ಇವೆರಡನ್ನು ಇಷ್ಟಪಡುವುದಿಲ್ಲ. ಆದರೆ ಹೃದಯಕ್ಕೆ ಬದನೆಕಾಯಿ ಮತ್ತು ಬೆಂಡೆಕಾಯಿಯಿಂದ ಮಾಡಿದ ಭಕ್ಷ್ಯಗಳನ್ನು ತಿನ್ನಬೇಕು. ಈ ಎರಡೂ ಹೃದಯವನ್ನು ರಕ್ಷಿಸುತ್ತವೆ.

    ಡ್ರೈ ಫ್ರೂಟ್ಸ್​​​​
    ನೆನೆಸಿದ ಗೋಡಂಬಿ, ಬಾದಾಮಿ, ವಾಲ್​​​​​ನಟ್ಸ್, ಪಿಸ್ತಾ, ಕಡಲೆಕಾಯಿಗಳನ್ನು ಪ್ರತಿದಿನ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಆದರೆ ಅತಿಯಾಗಿ ಸೇವಿಸಬಾರದು, ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ರಕ್ತಪ್ರವಾಹಕ್ಕೆ ಪ್ರವೇಶಿಸುವುದನ್ನು ತಡೆಯುತ್ತದೆ.

    ಸಿಟ್ರಸ್ ಹಣ್ಣುಗಳು
    ಸಿಟ್ರಸ್ ಹಣ್ಣುಗಳಾದ ಆವಕಾಡೊ, ಪಪ್ಪಾಯಿ, ದ್ರಾಕ್ಷಿ, ಸ್ಟ್ರಾಬೆರಿ ಮತ್ತು ಸೇಬುಗಳನ್ನು ಪ್ರತಿದಿನ ತಿನ್ನಬೇಕು. ಇವೆಲ್ಲವೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಸೋಯಾ ಆಧಾರಿತ ತೋಫು, ಸೋಯಾ ಹಾಲು ಮತ್ತು ಸೋಯಾಬೀನ್‌ಗಳು ಕೆಟ್ಟ ಕೊಲೆಸ್ಟ್ರಾಲ್‌ನ ಮೇಲೆ ಪ್ರಬಲ ಪರಿಣಾಮವನ್ನು ಬೀರಿ, ಹೃದಯದ ಆರೋಗ್ಯ ಕಾಪಾಡುತ್ತವೆ.

    ಗಮನಿಸಿ: ವಿವಿಧ ಅಧ್ಯಯನಗಳು ಮತ್ತು ಸಂಶೋಧನೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಎಂದಿನಂತೆ ಇಲ್ಲಿ ಒದಗಿಸಲಾಗಿದೆ. ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿದ ನಂತರವೇ ಈ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಮರೆಯದಿರಿ. ಈ ಮಾಹಿತಿಯು ನಿಮ್ಮ ಮಾಹಿತಿಗಾಗಿ ಮಾತ್ರ.

    ಶ್ರೀ ಕೃಷ್ಣನಿಗೆ ಪ್ರಿಯವಾದ ಪಂಚಾಮೃತವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts