ಗಣರಾಜ್ಯೋತ್ಸವ ಪಥಸಂಚಲನಕ್ಕೆ ಹರ್ಷಿತ್ ಆಯ್ಕೆ

Sul_Harshith
Published on

ಸುಳ್ಯ: ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಿಂದ 12 ಎನ್ನೆಸ್ಸೆಸ್ ಸ್ವಯಂಸೇವಕರು ದೆಹಲಿಯ ಗಣರಾಜ್ಯೋತ್ಸವ ಪರೇಡ್‌ಗೆ ವಿಶೇಷ ಅತಿಥಿಗಳಾಗಿ ಆಯ್ಕೆಯಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗೂ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ.

ದ್ವಿತೀಯ ಬಿಕಾಂ ವಿದ್ಯಾರ್ಥಿ ಎನ್ನೆಸ್ಸೆಸ್ ನಾಯಕ ಹರ್ಷಿತ್ ಕೆ.ಎಲ್. ಆಯ್ಕೆಯಾಗಿರುವ ವಿದ್ಯಾರ್ಥಿ. ಇವರೊಂದಿಗೆ ಅವರ ಪಾಲಕರಿಗೂ ಮಗನೊಂದಿಗೆ ದೆಹಲಿ ಪ್ರಯಾಣದ ಅವಕಾಶ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net