

ಬೆಂಗಳೂರು: ನಾಟ್ಯ ಮಯೂರಿ ಕ್ಲಾಸಿಕಲ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ನ ವಿದುಷಿ ಶ್ರೀಲಕ್ಷ್ಮಿ ರಂಗನಾಥ ಶಿಷ್ಯೆ ಹರ್ಷಿತ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಶನಿವಾರ (ಮೇ 24) ನಡೆಯಲಿದೆ.
ಪಿ.ಮಹದೇಶ್ವರ ಮತ್ತು ಸುನಂದ ದಂಪತಿಗಳ ಪುತ್ರಿಯಾಗಿರುವ ಹರ್ಷಿತ ಕಳೆದ ಕೆಲ ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಳು. ಮಲ್ಲೇಶ್ವರದ 14ನೇ ಕ್ರಾಸ್ನಲ್ಲಿರುವ ಸೇವಾಸದನದಲ್ಲಿ ಶನಿವಾರ ಸಂಜೆ 5.30ಕ್ಕೆ ರಂಗಪ್ರವೇಶ ಮಾಡಲಿದ್ದಾಳೆ. ಕಾರ್ಯಕ್ರಮಕ್ಕೆ ಸಂಗೀತ ವಿಮರ್ಶಕ ಡಾ.ಎಂ.ಸೂರ್ಯ ಪ್ರಸಾದ್, ವಿದುಷಿ ಸ್ನೇಹ ಕಪ್ಪಣ್ಣ, ಗುರು ಹರಿಹರನ್ ಹೇರಂಭನಾಥ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಪ್ರಾವಿಡೆಂಟ್ ಹೌಸಿಂಗ್ ಲಿ. ಸಿಇಓ ಮಲ್ಲಣ್ಣ ಸಾಸಲು ಅವರಿಗೆ ಗೌರವ ಸನ್ಮಾನ ನಡೆಯಲಿದೆ.