More

    ಅತಿಥಿಯಾದ ಹರ್ಷಿಕಾ ಪೂಣಚ್ಚ; ಕಟ್ಲೆ ಬಳಗಕ್ಕೆ ಸೇರ್ಪಡೆ

    ಹರ್ಷಿಕಾ ಪೂಣಚ್ಚ ಈಗಾಗಲೇ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡದ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಅವರಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿವೆ. ಈ ನಡುವೆ ‘ಕಟ್ಲೆ’ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಹರ್ಷಿಕಾ ನಟಿಸಿದ್ದಾರೆ. ಅಂದಹಾಗೆ, 80ಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಸ್ಯನಟನಾಗಿ ನಟಿಸಿರುವ ಕೆಂಪೇಗೌಡ ‘ಕಟ್ಲೆ’ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಅಮೃತಾ ನಾಯಕಿಯಾಗಿದ್ದಾರೆ. ಈ ಬಳಗಕ್ಕೆ ಹರ್ಷಿಕಾ ಸಹ ಸೇರ್ಪಡೆಯಾಗಿದ್ದು, ತಮ್ಮ ಪಾತ್ರದ ಶೂಟಿಂಗ್ ಸಹ ಮುಗಿಸಿದ್ದಾರೆ. ‘ಇದೊಂದು ವಿಶೇಷವಾದ ಪಾತ್ರ. ಇಡೀ ಸಿನಿಮಾಕ್ಕೆ ತಿರುವು ನೀಡುವಂಥ ಪಾತ್ರ’ ಎಂಬುದು ಹರ್ಷಿಕಾ ಮಾತು. ಅಂದಹಾಗೆ, ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ಭರತ್​ಗೌಡ ಬಂಡವಾಳ ಹೂಡಿದ್ದು, ಎಸ್.ಎಸ್. ವಿಧಾ ನಿರ್ದೇಶನ ಮಾಡಿದ್ದಾರೆ.

    ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts