

ಭಾರತ: ಭಾರತದ ಮಹಿಳಾ ಕ್ರಿಕೆಟ್ ತಂಡವು ಪ್ರಸ್ತುತ ಜುಲೈ 22 ರಂದು ಢಾಕಾದಲ್ಲಿ ನಡೆದ ಮೂರನೇ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಪಂದ್ಯವಾಡಿತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ ಎಲ್ಬಿಡಬ್ಲ್ಯೂ ಆದ ಕಾರಣ ಅಂಪೈರ್ ಔಟ್ ಎಂದು ಘೋಷಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಅವರು ಬ್ಯಾಟ್‌ನಿಂದ ಸ್ಟಂಪ್ಸ್ ಅನ್ನು ಹೊಡೆದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಸ್ವೀಪ್ ಶಾಟ್ ಹೊಡೆಯಲು ಯತ್ನಿಸಿದಾಗ ಅವರ ಲೆಗ್ ಪ್ಯಾಡ್ಗೆ ಬಾಲ್ ಟಚ್ ಆಗಿದೆ. ಇದನ್ನು ನೋಡಿದ ಆನ್‌ಫೀಲ್ಡ್ ಅಂಪೈರ್ ಔಟ್ ಎಂದು ಹೇಳಿದರು. ಈ ನಿರ್ಧಾರದಿಂದ ತೀವ್ರ ಆಕ್ರೋಶಕ್ಕೆ ತುತ್ತಾದ ಹರ್ಮನ್‌ಪ್ರೀತ್, ತಮ್ಮ ಬ್ಯಾಟನ್ನು ಹಿಂದೆಯಿದ್ದ ಸ್ಟಂಪ್ಸ್ಗೆ ಬೀಸಿ ಹೊಡೆಯುವ ಮೂಲಕ ಕೋಪವನ್ನು ಪ್ರದರ್ಶಿಸಿದ್ದಾರೆ. ಸ್ಥಳದಲ್ಲಿದ್ದ ಅಂಪೈರ್ ಹರ್ಮನ್ ಪ್ರೀತ್ ಕೌರ್ ಅವರ ನಡೆಯನ್ನು ಖಂಡಿಸಿದ್ದಾರೆ. ಕೆಲ ಸಮಯ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅವರು ಪೆವಿಲಿಯನ್ ಕಡೆ ತೆರಳಿದ್ದಾರೆ.
ಸದ್ಯ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ಕೆಲವರು ಹರ್ಮನ್ ಪ್ರೀತ್ ಕೌರ್ಗೆ ಬೆಂಬಲ ಸೂಚಿಸಿದರೆ, ಇನ್ನು ಕೆಲವರು ತಾಳ್ಮೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).