ಅಂತಃಸತ್ವದಿಂದ ಹರಿಕಥೆ ಕಲೆ ಶಾಶ್ವತ: ಉದ್ಯಮಿ ಉಪೇಂದ್ರ ಆಚಾರ್ಯ ಅನಿಸಿಕೆ

New Project (31)
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಅಧ್ಯಾತ್ಮ, ಪುರಾಣ, ಸಂಗೀತ ಶಾಸ್ತ್ರೀಯತೆಗಳಿಂದ ಕೂಡಿರುವ ಹರಿಕಥೆ, ಅಂತಃಸತ್ವದಿಂದ ಶಾಶ್ವತವಾಗಿ ಉಳಿಯುವ ಕಲೆ ಎಂದು ಎಸ್.ಕೆ.ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಹೇಳಿದರು.

ಹರಿಕಥಾ ಪರಿಷತ್ ಮಂಗಳೂರು, ಕದ್ರಿ ಮಲ್ಲಿಕಟ್ಟೆ ಕೃಷ್ಣ ಕಲ್ಯಾಣ ಮಂದಿರದಲ್ಲಿ ಬುಧವಾರ ದ.ಕ, ಉಡುಪಿ, ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಹರಿಕಥಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳಿಂದ ಇಂತಹ ಕಲೆಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವೆನಿಸಿದೆ ಎಂದು ಅವರು ಹೇಳಿದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡಿದರು. ಬೆಂಗಳೂರಿನ ಷಡ್ಜ ಕಲಾಕೇಂದ್ರ ಟ್ರಸ್ಟ್ ಸಂಚಾಲಕ ಡಾ.ದತ್ತಾತ್ರೆಯ ಎಲ್.ವೇಲಣ್ಕರ್, ವಿಜಯ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಸುಂದರ ಶೆಟ್ಟಿ ಬೆಟ್ಟಂಪಾಡಿ, ಎಸ್.ಕೆ.ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಜಿ.ಎಂ.ಯಜ್ಞೇಶ್ವರ ಆಚಾರ್ಯ ಅತಿಥಿಗಳಾಗಿದ್ದರು.

ಹರಿಕಥಾ ಪರಿಷತ್ ಕೋಶಾಧಿಕಾರಿ ಡಾ.ಎಸ್.ಪಿ.ಗುರುದಾಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಸುಧಾಕರ ರಾವ್ ಪೇಜಾವರ ವಂದಿಸಿದರು. ವೈಭವಿ ಕುಂಬಳೆ ಪ್ರಾರ್ಥಿಸಿದರು. ಮಹೇಶ್ ಕುಮಾರ್ ಸ್ಪರ್ಧೆ ನಿರ್ವಹಿಸಿದರು.

ಪರಿಷತ್ತಿನ ಉಪಾಧ್ಯಕ್ಷ ನಾರಾಯಣ ರಾವ್, ಕಾಸರಗೋಡು ಸಂಚಾಲಕ ಶಂನಾಡಿಗ ಕುಂಬಳೆ, ಶೇಣಿ ಮುರಳಿ, ಸುಧಾಕರ್ ಆಚಾರ್, ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ದಿನಪೂರ್ತಿ ನಡೆದ ಸ್ಪರ್ಧೆಯ ತೀರ್ಪುಗಾರರಾಗಿ ಮನೋಹರ ರಾವ್, ರಮೇಶ್ ಹೆಬ್ಬಾರ್, ಚಂದ್ರಕಾಂತ ಭಟ್, ನಿತ್ಯಾನಂದ ಕಾರಂತ, ಜಿ.ಕೆ.ಭಟ್ ಸೇರಾಜೆ, ಮಂಜುಳಾ ರಾವ್ ಸಹಕರಿಸಿದರು.

ಫಲಿತಾಂಶ

ಜೂನಿಯರ್ ವಿಭಾಗ: ಪ್ರಣಮ್ಯಾ ಕೆ.ಎಸ್.ನಾಯ್ಕಪು (ಪ್ರಥಮ), ದೇವಿಕಾ ಪುತ್ತೂರು (ದ್ವಿತೀಯ) ಸಾತ್ವಿಕ್‌ಕೃಷ್ಣ ಬಂದ್ಯೋಡು (ತೃಯ) ಸೀನಿಯರ್ ವಿಭಾಗ: ಪೂಜಾ ವಾಸುದೇವ ಐಲ (ಪ್ರಥಮ), ನಿಶ್ವಿತಾ ಕೃಷ್ಣ ಭಟ್ (ದ್ವಿತೀಯ), ಅಭಿಜ್ಞಾ ಭಟ್ ಬೊಳುಂಬು(ತೃತೀಯ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net