ವದಂತಿಗಳಿಗೆ ಫುಲ್ ಕ್ಲಾರಿಟಿ ನೀಡಿದ ಹಾರ್ದಿಕ್ ಮಾಜಿ ಪತ್ನಿ Natasa Stankovic!

natasa for web
Published on

ಮುಂಬೈ: ( Natasa Stankovic ) ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಸಾ ಅವರು ವಿಚ್ಛೇದನ ನಂತ್ರ ತಮ್ಮ ಮಗ ಅಗಸ್ತ್ಯನೊಂದಿಗೆ ದೇಶ ತೊರೆಯುತ್ತಿದ್ದಾರೆ ಎಂಬ ವದಂತಿಗಳಿದ್ದವು. ಈ ಕುರಿತಾಗಿ ಸ್ವತಃ ನತಾಸಾ  ಅವರೆ ಸಂದರ್ಶನವೊಂದರಲ್ಲಿ ಮಾತನಾಡಿ ಕಡಿವಾಣ ಹಾಕಿದ್ದಾರೆ.

Natasa Stankovic

ಕಳೆದ ಜುಲೈನಲ್ಲಿ ನತಾಶಾ ಮತ್ತು ಹಾರ್ದಿಕ್ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ ನಂತರ, ನತಾಶಾ ತನ್ನ ಮಗ ಅಗಸ್ತ್ಯನೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಂತರ, ಅವರು ಸರ್ಬಿಯಾಕ್ಕೆ ಹೋಗಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದವು. ಭಾರತವನ್ನು ತೊರೆದು ಸೆರ್ಬಿಯಾಕ್ಕೆ ಹಿಂತಿರುಗುತ್ತಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ನತಾಸಾ, ನಾನು ಹೇಗೆ ಹಿಂತಿರುಗಲಿ? ನನಗೆ ಒಬ್ಬ ಮಗನಿದ್ದಾನೆ. ಅಗಸ್ತ್ಯ ಇಲ್ಲಿ ಶಾಲೆಗೆ ಹೋಗುತ್ತಿದ್ದಾನೆ. ಅಂತಹ ಸಮಯದಲ್ಲಿ ನನಗೆ ಸರ್ಬಿಯಾಕ್ಕೆ ಹೋಗಲು ಸಾಧ್ಯವಿಲ್ಲ. 10 ವರ್ಷಗಳಿಂದ ನಾನು ಪ್ರತಿ ವರ್ಷ ಸರ್ಬಿಯಾಕ್ಕೆ  ಹೋಗಿ ಬರುತ್ತಿದ್ದೇನೆ ಅಷ್ಟೆ, ಆದರೆ ನಾನು ಎಲ್ಲೂ ಹೋಗಿಲ್ಲ .. ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 ನನ್ನ ಮಗ ಅಗಸ್ತ್ಯ ತನ್ನ ತಂದೆ-ತಾಯಿ ಇಬ್ಬರ ಜೊತೆಯೂ ಇರಬೇಕು. ಅಗಸ್ತ್ಯನಿಗೆ ನಾವು ಕುಟುಂಬವಾಗಿ ಮುಂದುವರಿಯುತ್ತೇವೆ. ನಾನು ಹಾರ್ದಿಕ್ ಜತೆ ಇರಲು ಸಾಧ್ಯವಿಲ್ಲ, ಆದರೆ ಇಬ್ಬರೂ ಅಗಸ್ತ್ಯಗೆ ಪೋಷಕರಾಗುತ್ತಾರೆ. ತನ್ನ ಜೀವನವು ಈಗ ತನ್ನ 4 ವರ್ಷದ ಮಗನ ಸುತ್ತ ಸುತ್ತುತ್ತದೆ ಮತ್ತು ಅವನೊಂದಿಗೆ ಯಾವಾಗಲೂ ಇರುತ್ತೇನೆಂದಿದ್ದಾರೆ.

ಯಾರು ಏನೇ ಹೇಳಿದರೂ, ನಿಮ್ಮ ಉದ್ದೇಶಗಳು ನೇರವಾಗಿದ್ದರೆ ಮತ್ತು ನಿಮ್ಮ ಹೃದಯ ಶುದ್ಧವಾಗಿದ್ದರೆ, ನೀವು ಯಾವುದಕ್ಕೂ ತಲೆಬಾಗಬೇಕಾಗಿಲ್ಲ. ಕ್ಷಣ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸಿದ ನಂತರ ತನ್ನ ಮಾನಸಿಕ ಆರೋಗ್ಯವು ಹಾಳಾಗಿದೆ. ಮಗನಿಗೆ ಸಂತೋಷವಾಗಿದ್ದೇನೆ ಮತ್ತು ಭವಿಷ್ಯದಲ್ಲಿಯೂ ಸಂತೋಷವಾಗಿರುತ್ತೇನೆ ಎಂದು ಹೇಳಿದರು.

ನತಾಸಾ ಮತ್ತು ಹಾರ್ದಿಕ್ ಪಾಂಡ್ಯ ಜನವರಿ 1, 2020 ರಂದು ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಅದೇ ವರ್ಷ ಜುಲೈ 2020 ರಲ್ಲಿ ತಮ್ಮ ಮಗನನ್ನು ಸ್ವಾಗತಿಸಿದರು ಮತ್ತು ಫೆಬ್ರವರಿ 14, 2023 ರಂದು ಉದಯಪುರದಲ್ಲಿ ತಮ್ಮ ವಿವಾಹವಾದರು. ಸುಮಾರು ಒಂದು ವರ್ಷದ ನಂತರ, ಜುಲೈನಲ್ಲಿ, ಅವರು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು ಆದರೆ ಮಗ ಅಗಸ್ತ್ಯನನ್ನು ಒಟ್ಟಿಗೆ ಸಹ-ಪೋಷಕರಾಗಿ ಬೆಳೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net