ಶ್ರೀಲಂಕಾ ಪ್ರವಾಸ: ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ!

hd
Published on

ನವದೆಹಲಿ: ಭಾರತ ಟಿ20 ತಂಡದ ನೂತನ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ವಿರುದ್ಧ ಜುಲೈ 27ರಂದು ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಗೆ ನಾಯಕರಾಗಿದ್ದಾರೆ. ಆದರೆ ನಂತರ ನಡೆಯುವ ಏಕದಿನ ಸರಣಿಗೆ ಅವರು ಲಭ್ಯರಿರುವುದಿಲ್ಲ.

ಮತ್ತೊಂದು ಕಡೆ ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಕೂಡ ಚುಟುಕು ಕ್ರಿಕೆಟ್‌ಗೆ ಗುಡ್‌ಬೈ ಎಂದಿದ್ದಾರೆ. ಇದರ ನಡುವೆ ಭಾರತ ಟಿ20 ತಂಡಕ್ಕೆ ಮುಂದಿನ ನಾಯಕ ಯಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು. ಇದರ ನಡುವೆ ಬಿಸಿಸಿಐ ಕಾರ್ಯದರ್ಶಿ ಜಯ ಷಾ ಅವರು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮೇಲೆ ಒಲವು ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಟಿ20 ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲು ಆಯ್ಕೆ ಸಮಿತಿ ನಿರ್ಧಿರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇದರೊಂದಿಗೆ ಟೀಮ್ ಇಂಡಿಯಾ ಟಿ20 ತಂಡದ ನಾಯಕನಾಗಿ ಪಾಂಡ್ಯ ಕಾಣಿಸಿಕೊಳ್ಳುವುದು ದೃಢವಾಗಿದೆ.

ಯಾರೆಲ್ಲಾ ರೇಸ್​ನಲ್ಲಿದ್ದರು?: ಭಾರತ ತಂಡಕ್ಕೆ ಟಿ20 ವಿಶ್ವಕಪ್‌ ಗೆದ್ದುಕೊಟ್ಟ ಬಳಿಕ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ಟಿ 20 ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿತ್ತು.ಇದರಿಂದ ಹಾರ್ದಿಕ್ ಪಾಂಡ್ಯ ಜೊತೆ ಜಸ್​ಪ್ರೀತ್ ಬುಮ್ರಾ, ರಿಷಭ್ ಪಂತ್, ಸೂರ್ಯಕುಮಾರ್ ಹೆಸರುಗಳು ನಾಯಕತ್ವದ ರೇಸ್​ನಲ್ಲಿ ಕೇಳಿ ಬಂದಿತ್ತು. ಇದೀಗ ಪಾಂಡ್ಯರನ್ನೇ ಮುಂದುವರೆಸಲು ಆಯ್ಕೆ ಸಮಿತಿ ನಿರ್ಧರಿಸಿದ್ದು, ಅದರಂತೆ ಮುಂಬರುವ ಟಿ20 ಸರಣಿಗಳಲ್ಲಿ ಭಾರತ ಟಿ20 ತಂಡವನ್ನು ಪಾಂಡ್ಯ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.

Team India

ಜಿಂಬಾಬ್ವೆ ಪ್ರವಾಸದ ಬಳಿಕ ಶ್ರೀಲಂಕಾ ಪ್ರವಾಸ: ಜಿಂಬಾಬ್ವೆ ಸರಣಿ ಮುಗಿದಿದ್ದು ಭಾರತ ತಂಡವು ಶ್ರೀಲಂಕಾ ಪ್ರವಾಸ ಮಾಡಲಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಭಾರತ vs ಶ್ರೀಲಂಕಾ ಟಿ20 ಸರಣಿ ಕ್ರಮವಾಗಿ ಜುಲೈ 27 , ಜುಲೈ 28 ಹಾಗೂ ಜುಲೈ 30ರಂದು ಪಲ್ಲೆಕೆಲೆಯಲ್ಲಿ ನಡೆಯಲಿವೆ. ಹಿಂದಿನ ವೇಳಾ ಪಟ್ಟಿ ಪ್ರಕಾರ, 26, 27 29ರಂದು ಪಂದ್ಯ ನಡೆಯಬೇಕಿತ್ತು. ವಿಶೇಷವೆಂದರೆ ಟೀಮ್‌ ಇಂಡಿಯಾದ ನೂತನ ಹೆಡ್‌ ಕೋಚ್‌ ಆಗಿ ನೇಮಕವಾಗಿರುವ ಗೌತಮ್‌ ಗಂಭೀರ್‌ ಅವರಿಗೆ ಮೊದಲ ಪ್ರವಾಸವಾಗಲಿದೆ.

ನಾಯಕನಾಗಿ ಹಾರ್ದಿಕ್‌ ಪಾಂಡ್ಯಗೆ ಅನುಭವ: ಟೀಂ ಇಂಡಿಯಾ ತಂಡದ ನಾಯಕನಾಗಿ ಹಾರ್ದಿಕ್‌ ಪಾಂಡ್ಯಗೆ ಅನುಭವವಿದೆ. 16 ಟಿ20 ಪಂದ್ಯಗಳಲ್ಲಿ ಪಾಂಡ್ಯ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದು, ಇದರಲ್ಲಿ 10 ಪಂದ್ಯಗಳಲ್ಲಿ ಗೆಲುವು ಪಡೆದಿದ್ದಾರೆ. ಇದರ ಜೊತೆಗೆ ಮೂರು ಏಕದಿನ ಪಂದ್ಯಗಳಲ್ಲಿಯೂ ಭಾರತ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ. 2022ರ ಐಪಿಎಲ್‌ ಟೂರ್ನಿಯಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್‌ ಚೊಚ್ಚಲ ಚಾಂಪಿಯನ್‌ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net