

ಮುಂಬೈ: ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದದಿಂದ ಹೊರಗುಳಿದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಚೇತರಿಸಿಕೊಂಡಿದ್ದು, ಭರ್ಜರಿ ಪ್ರದರ್ಶನದ ಮೂಲಕ ಭಾರತ ತಂಡವನ್ನು ಸೇರಿಕೊಳ್ಳವ ತವಕದಲ್ಲಿದ್ದಾರೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಮಂಗಳವಾರ ನಡೆದ ಡಿವೈ ಪಾಟೀಲ್ ಟಿ20 ಕಪ್ ಟೂರ್ನಿಯಲ್ಲಿ ರಿಲಯನ್ಸ್ 1 ತಂಡದ ಪರವಾಗಿ ಆಡಿದ ಹಾರ್ದಿಕ್ ಪಾಂಡ್ಯ ಸಿಎಜಿ ತಂಡದ ವಿರುದ್ಧ 7 ಬೌಂಡರಿ, 10 ಸಿಕ್ಸರ್ ನೆರವಿನಿಂದ 39 ಎಸೆತಗಳಲ್ಲಿ ಬರೋಬ್ಬರಿ 105 ರನ್ ಸಿಡಿಸಿದರು.
ಕೇವಲ 37ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಶತಕ ಪೂರೈಸಿದ್ದರು. ವಿ. ಜೀವರಾಜನ್ ಓವರ್ನಲ್ಲಿ 26 ರನ್ ಚಚ್ಚಿದ ಪಾಂಡ್ಯ, ರಿಲಯನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ಗೆ 252 ರನ್ ಪೇರಿಸಲು ನೆರವಾದರು.
ತಮ್ಮ ಉತ್ತಮ ಪ್ರದರ್ಶನದ ಬಗ್ಗೆ ಖುಷಿಯಿಂದಲೇ ಮಾತನಾಡಿರುವ ಹಾರ್ದಿಕ್, ಸುಮಾರು 6 ತಿಂಗಳು ಕ್ರಿಕೆಟ್ನಿಂದ ಹೊರಗುಳಿದಿದ್ದೆ. ಇಂದು ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ದೀರ್ಘಕಾಲದ ಬಳಿಕ ಆಡಿದ ಎರಡನೇ ಆಟ ಇದಾಗಿದೆ. ಸದ್ಯ ನನ್ನ ಫಿಟ್ನೆಸ್ ಪರೀಕ್ಷೆ ಇರುವುದರಿಂದ ನನಗೆ ಇದೊಂದು ಉತ್ತಮ ವೇದಿಕೆ. ಸದ್ಯ ನಡೆಯುತ್ತಿರುವ ವಿಚಾರಗಳಿಂದ ನಾನು ತುಂಬಾ ಸಂತಸಗೊಂಡಿದ್ದೇನೆ ಎಂದು ಶತಕವನ್ನು ಸಂಭ್ರಮಿಸಿದರು. (ಏಜೆನ್ಸೀಸ್)