ಮುಂಬೈ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಸದ್ಯ ಕಠಿಣ ಸಮಯವನ್ನು ಎದುರಿಸುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಮುಗಿದ ಬಾರ್ಡರ್-ಗವಾಸ್ಕರ್ ಟ್ರೋಫಿ ಅದಕ್ಕೆ ಜೀವಂತೆ ಉದಾಹರಣೆಯಾಗಿದೆ. ಪ್ರಸ್ತುತ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ರೋಹಿತ್ ಶರ್ಮ ಮುಂಬರುವ ಚಾಂಪಿಯನ್ಸ್ ಟ್ರೋಫಿ ನಿಟ್ಟಿನಲ್ಲಿ ಮುಂಬೈ ರಣಜಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದು, ಇದೀಗ ಅವರಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ ಕಣಕ್ಕಿಳಿದಿದ್ದ ರೋಹಿತ್ ಶರ್ಮ (Rohit Sharma) ಹಾಗೂ ಹಾರ್ದಿಕ್ ಪಾಂಡ್ಯ ನಾಯಕತ್ವದ ವಿಚಾರವಾಗಿ ಉಂಟಾದ ಮನಸ್ತಾಪದಿಂದಾಗಿ ಅಂತರ ಕಾಯ್ದುಕೊಂಡಿದ್ದರು. ಮೈದಾನದ ಒಳಗೂ ಹಾಗೂ ಹೊರಗೂ ಈ ಇಬ್ಬರು ಆಟಗಾರರು ಮಾತನಾಡಿದ್ದನ್ನು ಯಾರು ನೋಡಿರಲಿಲ್ಲ. ಇದೀಗ ರೋಹಿತ್ ಶರ್ಮ ಫಾರ್ಮ್ಗೆ ಮರಳುವ ಸಲುವಾಗಿ ಮುಂಬೈ ಇಂಡಿಯನ್ಸ್ ತಂಡದೊಂದಿಗೂ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ ಹಾರ್ದಿಕ್ ಪಾಂಡ್ಯ ಹಿಟ್ಮ್ಯಾನ್ರ ಜತೆ ಕಾಣಿಸಿಕೊಂಡಿದ್ದಾರೆ.
Rohit Sharma & Hardik Pandya Practicing together ahead of Champions Trophy
📍 Reliance Corporate Park Navi Mumbai pic.twitter.com/QS6hm5kiEJ
— रॉयल चॅलेंजर्स बंगळुरू मराठी (@RCB_Marathi) January 16, 2025
ಆರ್ಸಿಬಿ ಮರಾಠಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋ (Video) ನೋಡುವುದಾದರೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದು, ರೋಹಿತ್ ಶರ್ಮ ಬ್ಯಾಟ್ ಬೀಸಿದ್ದಾರೆ. ನವಿ ಮುಂಬೈನಲ್ಲಿರುವ ರಿಲಯನ್ಸ್ ಕಾರ್ಪೋರೇಟ್ ಪಾರ್ಕ್ನಲ್ಲಿ ಈ ಇಬ್ಬರು ಆಟಗಾರರು ಜಂಟಿಯಾಗಿ ಅಭ್ಯಾಸ ನಡೆಸಿದ್ದು, ಇಷ್ಟು ದಿನ ಪರಸ್ಪರ ಅಂತರ ಕಾಯ್ದುಕೊಂಡಿದ್ದ ಈ ಇಬ್ಬರು ಆಟಗಾರರು ಒಂದಾಗಿರುವುದನ್ನು ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಇನ್ನೂ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಬಿಸಿಸಿಐ ಇಂದು 15 ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಇದಕ್ಕೂ ಮುನ್ನ ನಡೆಯುವ ಸುದ್ದಿಗೋಷ್ಠಿಯನ್ನು ಅಜಿತ್ ಅಗರ್ಕರ್ ಹಾಗೂ ರೋಹಿತ್ ಶರ್ಮ ಉದ್ದೇಶಿಸಿ ಮಾತನಾಡಲಿದ್ದಾರೆ. ನಿನ್ನೆಯಷ್ಟೇ (ಜನವರಿ 17) ಬಿಸಿಸಿಐ ಆಟಗಾರರ ಫಾರ್ಮ್ ವಿಚಾರವಾಗಿ 10 ಅಂಶಗಳ ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಈ ನಿಯಮಗಳಿಗೆ ಕೆಲವು ಆಟಗಾರರು ವಿರೋದ ವ್ಯಕ್ತಪಡಿಸಿದ್ದರು.
ನಮಗೆ ಸಿಕ್ಕ ಆತಿಥ್ಯ… Champions Trophy ಹೊಸ್ತಿಲಲ್ಲೇ ಭಾರತದ ಬಗ್ಗೆ ಪಾಕ್ ಆಟಗಾರನ ಹೇಳಿಕೆ ವೈರಲ್
ಬಹ್ರೇನ್ನಲ್ಲಿ ಕಮಾಲ್ ಮಾಡಿದ ಭಾರತೀಯ; 71 ಕೋಟಿ ರೂ. Lottery ಗೆದ್ದು ತಾಯಿಯ ಕನಸು ನನಸು ಮಾಡಿದ ವ್ಯಕ್ತಿ