

ಮುಂಬೈ: ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ದಂಪತಿಯ ಪುತ್ರನಿಗೆ ಭಾನುವಾರ ಒಂದು ತಿಂಗಳು ಪೂರ್ಣಗೊಂಡ ಸಂಭ್ರಮ. ಜುಲೈ 30ರಂದು ಜನಿಸಿದ ಪುತ್ರನಿಗೆ ಈಗಾಗಲೆ ಅಗಸ್ತ್ಯ ಎಂದು ನಾಮಕರಣ ಮಾಡಲಾಗಿದ್ದು, ಮಗುವಿನೊಂದಿಗೆ ಪೋಸ್ ನೀಡುತ್ತ ನತಾಶಾ ಅವರು 1 ತಿಂಗಳ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಈಗಾಗಲೆ ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳಿದ್ದಾರೆ. ಹೀಗಾಗಿ ನತಾಶಾ ಮತ್ತು ಅಗಸ್ತ್ಯ ಇಬ್ಬರೂ ಹಾರ್ದಿಕ್ ಪಾಂಡ್ಯರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನತಾಶಾ ಅವರು, 'ಅಗಸ್ತ್ಯನಿಗೆ ಒಂದು ತಿಂಗಳು, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಹಾರ್ದಿಕ್ ಪಾಂಡ್ಯ' ಎಂದು ಬರೆದು, ಹಾರ್ದಿಕ್ ಪಾಂಡ್ಯ ಚಿತ್ರದೆದುರು ಮಗುನೊಂದಿಗೆ ನಿಂತಿರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ನಸುಗೆಂಪು ಬಣ್ಣದ ಪೋಲ್ಕ ಡ್ರೆಸ್ನಲ್ಲಿ ನತಾಶಾ ಕಾಣಿಸಿಕೊಂಡಿದ್ದಾರೆ. ಅಬುಧಾಬಿಯಲ್ಲಿರುವ ಹಾರ್ದಿಕ್ ಪಾಂಡ್ಯ ಅವರು ಈಗಾಗಲೆ ಪತ್ನಿ ಮತ್ತು ಮಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದು, ಅವರಿಬ್ಬರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿರುವ ಚಿತ್ರವನ್ನೂ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು, 'ಮಿಸ್ಸಿಂಗ್ ಮೈ 2 ಏಂಜಲ್ಸ್. ನಿಮ್ಮಿಬ್ಬರನ್ನು ನನ್ನ ಜೀವನದಲ್ಲಿ ಪಡೆದುಕೊಂಡಿರುವುದು ನನ್ನ ಭಾಗ್ಯ' ಎಂದು ಬರೆದಿದ್ದರು.