ಮಗ ಹುಟ್ಟಿದ ಸಂಭ್ರಮವನ್ನು ಆಸ್ಪತ್ರೆ ಸಿಬ್ಬಂದಿ ಜತೆ ಆಚರಿಸಿದ ಹಾರ್ದಿಕ್​ ಪಾಂಡ್ಯ ದಂಪತಿ

hardik pandya for web
Published on

ಬೆಂಗಳೂರು: ಭಾರತ ತಂಡದ ಆಲ್ರೌಂಡರ್​ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಕೇಂದ್ರ ಬಿಂದುವಾಗಿದ್ದಾರೆ. ಗುಜರಾತ್​ನ ಆನಂದ್​ ನಗರದ ಅಕಾಂಕ್ಷಾ ಆಸ್ಪತ್ರೆಯಲ್ಲಿ ಪಾಂಡ್ಯ ಪತ್ನಿ ನತಾಶಾ ಜುಲೈ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಒಂದು ವಾರಗಳ ಬಳಿಕ ಪಾಂಡ್ಯ ದಂಪತಿ ಆಸ್ಪತ್ರೆ ಸಿಬ್ಬಂದಿ ಜತೆಗೂಡಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೀಗ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

ಕಳೆದ ಒಂದು ವಾರದಿಂದ ನತಾಶಾ ಅವರನ್ನು ನೋಡಿಕೊಂಡ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಅಪಿರ್ಸುವ ಸಲುವಾಗಿ ಪಾಂಡ್ಯ ಚಿಕ್ಕ ಕೇಕ್​ ಪಾರ್ಟಿ ಹಮ್ಮಿಕೊಂಡಿದ್ದರು. ವೈದ್ಯರು, ದಾದಿಯರ ಜತೆಗೂಡಿ ಕೇಕ್​ ಕತ್ತರಿಸುವ ಮೂಲಕ ಪಾಂಡ್ಯ ಧನ್ಯವಾದ ಹೇಳಿದ್ದಾರೆ. ಕಳೆದ ಒಂದು ವಾರದಿಂದ ಆರೈಕೆ ಮಾಡಿದ್ದ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಪಾಂಡ್ಯ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಸಹೋದರ ಕೃನಾಲ್​ ಪಾಂಡ್ಯ ನಾನು ದೊಡ್ಡಪ್ಪನಾದೇ ಎಂದು ಇತ್ತೀಚೆಗಷ್ಟೇ ಮಗು ಎತ್ತಿಕೊಂಡು ಖುಷಿ ವ್ಯಕ್ತಪಡಿಸಿದ್ದರು. ಪಾಂಡ್ಯ ಸಹೋದರರು ಮುಂದಿನ ತಿಂಗಳಿನಿಂದ ಆರಂಭವಾಗಲಿರುವ 13ನೇ ಐಪಿಎಲ್​ನಲ್ಲಿ ಆಡಲು ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ. ಆಲ್ರೌಂಡರ್​ ಜೋಡಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net