ಈ ವಿಷಯದಲ್ಲಿ ಈತ ವಿರಾಟ್​ರಂತೆ! ಕೆಕೆಆರ್​​ ಆಟಗಾರನನ್ನು 'ಕಿಂಗ್'​ ಕೊಹ್ಲಿಗೆ ಹೋಲಿಸಿದ ಬಜ್ಜಿ | Virat Kohli

ವಿಜಯವಾಣಿ - 2025-04-02T165656.210
Published on

Virat Kohli: ಪ್ರಸಕ್ತ ಐಪಿಎಲ್​ 18ನೇ ಆವೃತ್ತಿಯಲ್ಲಿ ಅದ್ಭುತ ಆಲ್​ರೌಂಡ್​ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಕೇವಲ ಫ್ರಾಂಚೈಸಿ ಅಭಿಮಾನಿಗಳನ್ನು ಮಾತ್ರವಲ್ಲದೇ ಕ್ರಿಕೆಟ್ ಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಆಡಿದ ಮೊದಲೆರೆಡು ಪಂದ್ಯಗಳಲ್ಲಿ ಭರ್ಜರಿ, ರೋಚಕ ಜಯ ಸಾಧಿಸಿರುವ ಆರ್​ಸಿಬಿ, ಹೆಚ್ಚುವರಿ ಅಂಕಗಳೊಂದಿಗೆ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಆರ್​ಸಿಬಿ ತಂಡದ ಬಲಿಷ್ಠ ಆಟಗಾರ, ಕ್ರಿಕೆಟ್​ ದಿಗ್ಗಜ ವಿರಾಟ್​ ಕೊಹ್ಲಿ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಮಾತನಾಡಿದ್ದಾರೆ.

ಕಳೆದ ಆವೃತ್ತಿಯಲ್ಲಿ ಚಾಂಪಿಯನ್ಸ್ ಆಗಿ ಮಿಂಚಿದ ಕೋಲ್ಕತ ನೈಟ್​ ರೈಡರ್ಸ್​ ತಂಡ ಈ ಬಾರಿ ಸೋಲು-ಗೆಲುವಿನ ಮಿಶ್ರಣವನ್ನು ಹೊತ್ತು ಸಾಗಿದೆ. ತಂಡದ ಬಹುತೇಕ ಆಟಗಾರರು ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಬಹಳ ವರ್ಷಗಳಿಂದ ಕೆಕೆಆರ್ ತಂಡದಲ್ಲೇ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ​ ಕನ್ನಡಿಗ ಮನೀಶ್ ಪಾಂಡೆಯನ್ನು ಬಜ್ಜಿ, ವಿರಾಟ್​ ಕೊಹ್ಲಿಗೆ ಹೋಲಿಕೆ ಮಾಡಿದ್ದಾರೆ.

"ವಿರಾಟ್​ ಕೊಹ್ಲಿ ಫಿಟ್ನೆಸ್​ ಮ್ಯಾಚ್ ಮಾಡುವ ಆಟಗಾರರು ಯಾರಾದರೂ ಇದ್ದಾರೆ ಎಂದರೆ ಅದು ಮನೀಶ್ ಪಾಂಡೆ ಮಾತ್ರ. 2008ರಿಂದ ಆರಂಭಗೊಂಡ ಐಪಿಎಲ್ ಮೊದಲ ಆವೃತ್ತಿಯಿಂದಲೂ ತಂಡದಲ್ಲಿರುವ ಅವರು, ಈಗಲೂ ಬಹಳ ಫಿಟ್​ ಆಗಿದ್ದಾರೆ. ಕೊಹ್ಲಿಯಂತೆ ಗಟ್ಟಿಯಾಗಿ ತಂಡದ ಪರ ಮಿಂಚುತ್ತಿದ್ದಾರೆ" ಎಂದು ಬಜ್ಜಿ ಅಭಿಪ್ರಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಕಾಶ್ ಚೋಪ್ರಾ, "ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ನಂತರ 2008ರಿಂದಲೂ ಐಪಿಎಲ್ ಆಡುತ್ತಿರುವ ನಾಲ್ಕನೇ ಆಟಗಾರ ಮನೀಶ್​" ಎಂದು ನೆನಪಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net