ಪುತ್ತೂರು: ಬೆಳ್ತಂಗಡಿ ತಾಲೂಕಿನ ಶಿಬಾಜೆ ಅಕೊಟೇಜಲ್ ನಿವಾಸಿಯೊಬ್ಬರು ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕೊಟೇಜಲ್ ನಿವಾಸಿ ಉದ್ಯಮಿ ಎ. ಸಿ. ಕುರಿಯನ್ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ಕು ವರ್ಷದ ಹಿಂದೆ ಕುರಿಯನ್ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ವಾಸಿಸಲು ಮನೆ ನೀಡಿದ್ದು, ಅವರ ರೂಮಿಗೆ ಚಹಾ ತಿಂಡಿ ತರಲು ಹೇಳಿ ಅಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕೆಲಸ ಬಿಟ್ಟರೂ ಹೊರ ಬಂದ ಸಂದರ್ಭ ನಿನ್ನನ್ನು ಈ ಭೂಮಿಯಲ್ಲಿ ಇರಲು ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಹಾಕಿದ್ದರೆಂದು ದೂರುನಲ್ಲಿ ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನ.೧೩ರಂದು ಕಡಬ ತಹಸೀಲ್ದಾರ್, ಕಡಬ ಮೆಸ್ಕಾಂ ಎಇ, ಕಂದಾಯ ನಿರೀಕ್ಷಕರು, ಜೆಸಿಬಿ ಚಾಲಕ ಮುಂತಾದವರು ಸೇರಿ ಜೆಸಿಬಿ ಮುಖಾಂತರ ಪೊಲೀಸರ ಸಮ್ಮುಖದಲ್ಲಿ ಮನೆಯಲ್ಲಿ ಧ್ವಂಸಗೊಳಿಸಿದ್ದಾರೆ. ನನ್ನ ವಿರುದ್ಧದ ದ್ವೇಷದ ಕಾರಣ ನನ್ನ ತಂದೆ – ತಾಯಿಯ ಮನೆ ಧ್ವಂಸ ಮಾಡಲಾಗಿದೆ. ಮಾನಕ್ಕೆ ಅಂಜಿ ತಡವಾಗಿ ದೂರು ದಾಖಲಿಸಿದ್ದೇನೆ ಎಂದು ಮಹಿಳೆ ದೂರಲ್ಲಿ ತಿಳಿಸಿದ್ದಾರೆ.