'ಬಿಗ್​ ಬಿಗ್​ ಲವ್ ಟು ಯು ಸು..!': ಕಿಚ್ಚನಿಗೆ ಜನ್ಮದಿನದ ಶುಭ ಕೋರಿದ ರಮ್ಯಾ

Ramya
Published on

ಸದ್ಯ ನಟಿ ರಮ್ಯಾ ಅವರು ಸದ್ಯ ಸಿನಿಮಾ, ರಾಜಕೀಯಗಳಿಂದೆಲ್ಲ ದೂರ ಉಳಿದಿದ್ದಾರೆ. ಆದರೆ ತಮ್ಮ ಇನ್ಸ್ಟಾಖಾತೆಯಲ್ಲಿ ಸದಾ ಸಕ್ರಿಯರಾಗಿದ್ದಾರೆ.

ಹಾಗೇ ಇಂದು ಕಿಚ್ಚ ಸುದೀಪ್​ ಅವರ ಹುಟ್ಟುಹಬ್ಬಕ್ಕೂ ರಮ್ಯಾ ಶುಭಕೋರಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸುದೀಪ್​ ಅವರು ನಗುತ್ತ ಕುಳಿತಿರುವ ಫೋಟೋ ಹಾಕಿ, ನಿಮ್ಮ ಜನ್ಮದಿನದಂದು ತುಂಬ ತುಂಬ ಪ್ರೀತಿಯಿಂದ ವಿಶ್​ ಮಾಡುತ್ತಿದ್ದೇನೆ ಸು..!, ಯಾವತ್ತೂ ಹೀಗೆ ನಗುತ್ತಿರಿ ಎಂದು ಪೋಸ್ಟ್ ಹಾಕಿದ್ದಾರೆ.

ಕಿಚ್ಚಹುಚ್ಚ, ಮುಸ್ಸಂಜೆ ಮಾತು, ರಂಗ ಎಸ್​ಎಸ್​ಎಲ್​ಸಿ ಇತ್ಯಾದಿ ಸಿನಿಮಾಗಳಲ್ಲಿ ಸುದೀಪ್​ ಮತ್ತು ರಮ್ಯಾ ಒಟ್ಟಾಗಿ ನಟಿಸಿದ್ದಾರೆ. ಇವರಿಬ್ಬರ ನಡುವೆ ಒಂದು ಹಂತದಲ್ಲಿ ಮನಸ್ತಾಪವೂ ಮೂಡಿತ್ತು ಎಂದೂ ಹೇಳಲಾಗುತ್ತದೆ. ಆದರೆ ಈಗಂತೂ ರಮ್ಯಾ ಸಿನಿರಂಗದಿಂದಲೂ ದೂರವೇ ಇದ್ದಾರೆ. ಸುದೀಪ್​ ಕೂಡ ತಮ್ಮ ಫಿಲ್ಮ್​, ಬಿಗ್​ಬಾಸ್​ ಶೋಗಳಲ್ಲಿ ಬಿಜಿಯಾಗಿದ್ದಾರೆ. ಆದರೂ ಇವರಿಬ್ಬರ ಮಧ್ಯೆ ಸ್ನೇಹವಿದೆ ಎಂಬುದಕ್ಕೆ ಇಂದು ರಮ್ಯಾ ಪ್ರೀತಿಯಿಂದ ಮಾಡಿದ ಜನ್ಮದಿನದ ಶುಭಾಶಯವೇ ಸಾಕ್ಷಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net